• 19 April 2019 19:59
Jai Kannada
Jai Kannada
Blog single photo
April 10, 2019

ಬಿಜೆಪಿ ಪ್ರಣಾಳಿಕೆಯಲ್ಲಿ 2 ಎರಡು ಪ್ರಮಾದಗಳ ಬಗ್ಗೆ ಗಮನಸೆಳೆದ ಸುಬ್ರಮಣಿಯನ್ ಸ್ವಾಮಿ 

ನವದೆಹಲಿ: ಬಿಜೆಪಿಯ ಹಿರಿಯ ಮುಖಂಡ ರಾಜ್ಯ ಸಭೆ ಸಂಸದ ಸುಬ್ರಮಣಿಯನ್ ಸ್ವಾಮಿ ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿರುವ 2 ಪ್ರಮಾದಗಳ ಬಗ್ಗೆ ಟ್ವಿಟರ್‌ನಲ್ಲಿ ಗಮನಸೆಳೆದಿದ್ದಾರೆ.

ಬಿಜೆಪಿ ಸೋಮವಾರ ಸಂಕಲ್ಪ ಬಿಡುಗಡೆ ಮಾಡಿರುವ ಸಂಕಲ್ಪ ಪತ್ರದಲ್ಲಿ  2022ರೊಳಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವುದಾಗಿ ಭರವಸೆ ನೀಡಿದೆ. ಆದರೆ ರೈತರ ಆದಾಯವನ್ನು 2022ರೊಳಗೆ ದುಪ್ಪಟ್ಟುಗೊಳಿಸುವುದು ಎಂದರೆ ಅದರರ್ಥ ಪ್ರತಿ ವರ್ಷದ ಬೆಳವಣಿಗೆ ದರ  24% ರಷ್ಟಿರಬೇಕಾಗುತ್ತದೆ. ಅದನ್ನು ಸಾಧಿಸುವುದು ತುಂಬಾ ಕಷ್ಟ.

ಬೆಳವಣಿಗೆ ದರವನ್ನು ಅತ್ಯುತ್ತಮವೆಂದರೆ ಪ್ರತಿ ವರ್ಷಕ್ಕೆ 10% ನಲ್ಲಿ ಇರಿಸಬಹುದು ಎಂದು ಸುಬ್ರಮಣ್ಯನ್ ಸ್ವಾಮಿ ಹೇಳಿದ್ದಾರೆ. ಭಾರತದ ಒಟ್ಟು ದೇಶೀಯ ಉತ್ಪನ್ನವು ಮೂರನೇ ಅತೀ ದೊಡ್ಡದಾಗಿದೆಯೇ ಹೊರತು ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ 6ನೆಯದಲ್ಲ ಎಂದಿದ್ದಾರೆ.
 ನಾನು ರಾಜನಾಥ್ ಸಿಂಗ್ ಅವರಿಗೆ ಈ ಕುರಿತು ಸಂದೇಶ ಕಳಿಸಿದ್ದು, ಎರಡು ಪ್ರಮಾದಗಳ ಬಗ್ಗೆ ಪ್ರಣಾಳಿಕೆಯನ್ನು ಪರಿಷ್ಕರಿಸುವಂತೆ ಹೇಳಿದ್ದೇನೆ ಎಂದು ಸ್ವತಃ ಅರ್ಥಶಾಸ್ತ್ರಜ್ಞರಾದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.


 

Recent Comments

Leave Comments

footer
Top