• 19 April 2019 20:41
Jai Kannada
Jai Kannada
Blog single photo
April 10, 2019

ಶಾಟ್‌ಪುಟ್ ಪಟು ಮನ್‌ಪ್ರೀತ್ ಕೌರ್‌ ಡೋಪ್ ಟೆಸ್ಟ್‌ನಲ್ಲಿ ಫೇಲ್:  4 ವರ್ಷಗಳ ನಿಷೇಧ

ಏಷ್ಯಾ ಚಾಂಪಿಯನ್ ಶಾಟ್‌ಪುಟ್ ಎಸೆತಗಾರ್ತಿ ಮನ್‌ಪ್ರೀತ್ ಕೌರ್ ಅವರನ್ನು ಉದ್ದೀಪನ ಮದ್ದು ಸೇವನೆಯ ಆರೋಪದ ಮೇಲೆ ನಾಲ್ಕು ವರ್ಷಗಳ ಕಾಲ ನಿಷೇಧ ವಿಧಿಸಲಾಗಿದೆ.  ಅಮಾನತು ಆದೇಶವು 2017ರ ಜುಲೈ 20ರಿಂದ ಆರಂಭವಾಗಲಿದೆ ಎಂದು ಉದ್ದೀಪನ ಮದ್ದು ನಿಗ್ರಹ ಶಿಸ್ತು ಸಮಿತಿಯ ಆದೇಶದಲ್ಲಿ ತಿಳಿಸಲಾಗಿದೆ.ಆ್ಯಂಟಿ ಡೋಪಿಂಗ್ ಅಪೀಲು ಸಮಿತಿ ಮುಂದೆ ಅವರಿಗೆ ಮೇಲ್ಮನವಿ ಸಲ್ಲಿಸುವ ಅಧಿಕಾರವಿರುತ್ತದೆ.

 ಈ ನಿಷೇಧದಿಂದಾಗಿ ಮನ್‌ಪ್ರೀತ್ 2017ರಲ್ಲಿ ಭುವನೇಶ್ವರದಲ್ಲಿ ಗೆದ್ದ ಏಷ್ಯನ್ ಚಾಂಪಿಯನ್ ಶಿಪ್ ಚಿನ್ನದ ಪದಕ ಮತ್ತು ಅವರ ರಾಷ್ಟ್ರೀಯ ದಾಖಲೆಯನ್ನು ಕಳೆದುಕೊಳ್ಳಲಿದ್ದಾರೆ. ಅವರ ಡೋಪ್ ಟೆಸ್ಟ್ ಮಾದರಿ ಸಂಗ್ರಹ ದಿನದಿಂದ ಗೆದ್ದಿರುವ ಎಲ್ಲಾ ಪದಕಗಳನ್ನು ಕಳೆದುಕೊಳ್ಳಲಿದ್ದಾರೆ. 

2017ರಲ್ಲಿ ಮನ್‌ಪ್ರೀತ್ ಅವರ ಉದ್ದೀಪನಾ ಮದ್ದು ಸೇವನೆ ಪರೀಕ್ಷೆಯಲ್ಲಿ ನಾಲ್ಕು ಬಾರಿ ಪಾಸಿಟಿವ್  ಆಗಿತ್ತು. ಮೊದಲಿಗೆ ಏಪ್ರಿಲ್ 24ರಂದು ಚೀನಾದ ಜಿನುಹಾದಲ್ಲಿ ನಡೆದ ಏಷ್ಯನ್ ಗ್ರಾಂಡ್ ಪ್ರಿಕ್ಸ್ ಅದರ ಬೆನ್ನಿಗೇ ಪಾಟಿಯಾಲಾದ ಫೆಡರೇಷನ್ ಕಪ್, ಭುವನೇಶ್ವರದ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಷಿಪ್‌ಗಳಲ್ಲಿ ಅವರು ಗೆದ್ದಿರುವ ಎಲ್ಲಾ ಚಿನ್ನದ ಪದಕಗಳನ್ನು ಕಳೆದುಕೊಳ್ಳಲಿದ್ದಾರೆ.
 

Recent Comments

Leave Comments

footer
Top