• 20 October 2019 20:01
Jai Kannada
Jai Kannada
Blog single photo
April 09, 2019

ಉರಿ, ದಿ ಸರ್ಜಿಕಲ್ ಸ್ಟ್ರೈಕ್ ನಟ ನವತೇಜ್ ಹುಂಡಾಲ್ ವಿಧಿವಶ 

ನವದೆಹಲಿ: ಉರಿ ದಿ ಸರ್ಜಿಕಲ್ ಸ್ಟ್ರೈಕ್  ಚಿತ್ರದಲ್ಲಿ ಗೃಹ ಸಚಿವನ ಪಾತ್ರದಲ್ಲಿ ಮಿಂಚಿದ್ದ ಹೆಸರಾಂತ ನಟ ನವತೇಜ ಹುಂಡಾಲ್ ಕೊನೆಯುಸಿರೆಳೆದಿದ್ದಾರೆ.

ನವತೇಜ್ ಪತ್ನಿ ಮತ್ತು ಇಬ್ಪರು ಪುತ್ರಿಯರನ್ನು ಅಗಲಿದ್ದಾರೆ. ಅವರ ಪುತ್ರಿಯರಲ್ಲಿ ಒಬ್ಬರಾದ ಅವಂತಿಕಾ ಹುಂಡಾಲ್ ಏಕ್ತಾ ಕಪೂರ್ ಜನಪ್ರಿಯ ಶೋ ಯೆ ಹೈ ಮೊಹಬ್ಬತೀನ್‌ನಲ್ಲಿ ಮಿಹಿಕಾ ಪಾತ್ರವನ್ನು ವಹಿಸಿದ್ದರು.

ಸಿನೆಮಾ ಮತ್ತು ಟಿವಿ ಕಲಾವಿದರ ಸಂಘ(ಸಿಂಟಾ) ದುಃಖತಪ್ತ ಕುಟುಂಬಕ್ಕೆ ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.  ಅದರ ಅಡಿಬರಹದಲ್ಲಿ ಹೀಗೆ ಕೊಡಲಾಗಿದೆ ಸಿಂಟಾ ಶ್ರೀ ನವತೇಜ್ ಹುಂಡಾಲ್ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದೆ.
 ಚಲನಚಿತ್ರಗಳಲ್ಲಿ ನಟನೆಯಲ್ಲದೇ ನವತೇಜ್ ನಟನಾ ತರಗತಿಗಳನ್ನು ನಿರ್ವಹಿಸುತ್ತಿದ್ದರು. ಖಳನಾಯಕ್ ಮತ್ತು ತೇರೆ ಮೇರೆ ಸಪ್ನಾ ಚಿತ್ರಗಳಲ್ಲಿ ಮತ್ತು ಭರತ್ ಏಕ್ ಖೋಜ್ ಮುಂತಾದ ಟೆಲಿವಿಷನ್ ಶೋಗಳಲ್ಲಿ ಪಾತ್ರವಹಿಸಿದ್ದಾರೆ.

Recent Comments

Leave Comments

footer
Top