• 19 April 2019 20:45
Jai Kannada
Jai Kannada
Blog single photo
April 09, 2019

ಪಡ್ಡೆ ಹುಲಿಯಲ್ಲಿ ಪುನೀತ್ ರಾಜ್‌ಕುಮಾರ್ ಕ್ಯಾಮಿಯೊ 

ನಿರ್ದೇಶಕ ಗುರುದೇಶಪಾಂಡೆಯವರ ಪಡ್ಡೆಹುಲಿ ಚಿತ್ರದಲ್ಲಿ  ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್‌ನನ್ನು ನಾಯಕ ನಟನಾಗಿ ಪರಿಚಯಿಸುತ್ತಿದ್ದು, ಅನೇಕ ವಿಶೇಷತೆಗಳಿಂದ ಕೂಡಿರುವುದು ಚಿತ್ರಕ್ಕೆ ಕ್ರೆಡಿಟ್ ಆಗಿದೆ.  ಅನೇಕ ವರ್ಷಗಳ ಬಳಿಕ ವಿ. ರವಿಚಂದ್ರನ್  ಜತೆಗೆ ಸುಧಾರಾಣಿಯನ್ನು ಈ ಚಿತ್ರ ತೆರೆಯ ಮೇಲೆ ತಂದಿದೆ.

ನಿರ್ದೇಶಕ-ನಟ ರಕ್ಷಿತ್ ಶೆಟ್ಟಿಗೆ ಚಿತ್ರದಲ್ಲಿ ವಿಶೇಷ ಪಾತ್ರವಿದ್ದು,  ಬಿಡುಗಡೆಯಾಗುವ ಟ್ರೇಲರ್‌ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕ್ಯಾಮಿಯೊ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಬಹಿರಂಗವಾಗಲಿದೆ.

ಚಿತ್ರದ ಕೊನೆಯ 15 ನಿಮಿಷಗಳಲ್ಲಿ ಪುನೀತ್ ಪಾತ್ರವು ಚಿತ್ರಕ್ಕೆ ದೊಡ್ಡ ತಿರುವು ನೀಡಲಿದ್ದು, ಹೊಸ ದಿಕ್ಕಿನತ್ತ ಕಥೆಯನ್ನು ತೆಗೆದುಕೊಂಡು ಹೋಗುತ್ತದೆ. 

ಶ್ರೇಯಸ್ ತಮ್ಮ ಚೊಚ್ಚಲು ಚಿತ್ರದಲ್ಲಿ ದಿವಂಗತ ವಿಷ್ಣುವರ್ಧನ್ ಅವರಿಗೆ 'ಗೌರವ' ಸಲ್ಲಿಸಲಿದ್ದಾರೆ. ಗುರು ದೇಶಪಾಂಡೆ ನಿರ್ದೇಶನದಲ್ಲಿ ಪಡ್ಡೆ ಹುಲಿ ಚಿತ್ರದ ನಾಯಕರಾಗಿರುವ ಶ್ರೇಯಸ್ ತಮ್ಮ 'ಇಂಟ್ರೊಡಕ್ಷನ್ ಸಾಂಗ್‌'ಅನ್ನು ನಟ ವಿಷ್ಣು ಅವರಿಗೆ ಅರ್ಪಿಸಲಿದ್ದು, ಚಿತ್ರದುರ್ಗದಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ. ವಿಷ್ಣವರ್ಧನ್  ನಾಗರಹಾವು ಚಿತ್ರದ ಚೊಚ್ಚಲ ಅಭಿನಯದಲ್ಲಿ ಚಿತ್ರದುರ್ಗದ ಕೋಟೆಯಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಅದರ ನೆನಪಿಗಾಗಿ ಶ್ರೇಯಸ್ ಗೀತೆ ಕೂಡ ಚಿತ್ರದುರ್ಗದಲ್ಲಿ ನಡೆಯಲಿದೆ.

Recent Comments

Leave Comments

footer
Top