• 20 October 2019 19:32
Jai Kannada
Jai Kannada
Blog single photo
April 08, 2019

ವರುಣ್ ಧವನ್ ಗೆಳತಿಯ ಹತ್ಯೆ ಬೆದರಿಕೆ ಹಾಕಿದ ಕ್ರೇಜಿ ಫ್ಯಾನ್ 

ಬಾಲಿವುಡ್ ನಟ ವರುಣ್ ಧವನ್ ತನ್ನ ಅಭಿಮಾನಿಗಳ ಜತೆ ಸಲುಗೆಯಿಂದ ಇರುತ್ತಾರೆ ಮತ್ತು ಆಗಾಗ್ಗೆ ಅವರ ಜತೆ ಸ್ನೇಹದಿಂದ ಅಣಕವಾಡುತ್ತಾರೆ. ಆದರೆ ಕ್ರೇಜಿ ಅಭಿಮಾನಿಯೊಬ್ಬರು ಅವರ ನಿವಾಸಕ್ಕೆ ತೆರಳಿ ಅವರ ಗೆಳತಿ ನಟಾಶಾ ದಲಾಲ್‌ಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದಾಗ ವರುಣ್ ಧವನ್ ಅತ್ಯಂತ ಕೆಟ್ಟ ದುಃಸ್ವಪ್ನವನ್ನು ಎದುರಿಸಿದರು.

ವರುಣ್ ತಮ್ಮ ಕಾಲಂಕ್ ಚಿತ್ರದ ಪ್ರಚಾರಗಳಲ್ಲಿ ಬಿಜಿಯಾಗಿದ್ದಾಗ ಅವರನ್ನು ಭೇಟಿಯಾಗಲು ಅಭಿಮಾನಿಯೊಬ್ಬರು ಗಂಟೆಗಟ್ಟಲೆ ಕಾದಿದ್ದರು. ವರುಣ್ ಭದ್ರತಾತಂಡ ಅಭಿಮಾನಿಯನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದಾಗ ಮಹಿಳಾ ಅಭಿಮಾನಿಯ ಕೋಪ ನೆತ್ತಿಗೇರಿತ್ತು. ವರುಣ್ ನಿವಾಸದ ಹೊರಗೆ ದೊಡ್ಡ ರಂಪ, ರಾದ್ಧಾಂತವನ್ನು ಎಬ್ಬಿಸಿದರು.

ನಟಾಶಾಳನ್ನು ಕೊಲ್ಲುತ್ತೇನೆ ಎಂದು ಮಹಿಳಾ ಅಭಿಮಾನಿ ಅಬ್ಬರಿಸತೊಡಗಿದರು. ಭದ್ರತಾತಂಡ ವರುಣ್ ಮನೆಯ ಬಳಿ ಮಹಿಳಾ ಅಭಿಮಾನಿಯೊಬ್ಬರು ಸುತ್ತುತ್ತಿದ್ದಾರೆಂದು ತಿಳಿಸಿದ್ದರು. ಅನೇಕ ಸಂದರ್ಭಗಳಲ್ಲಿ ಫ್ಯಾನ್‌ಗಳು ತಮ್ಮ ಗಡಿಯನ್ನು ದಾಟದೇ ಸಂಯಮದಿಂದ ಇರುತ್ತಾರೆ. ಆದರೆ ಮಹಿಳಾ ಫ್ಯಾನ್ ಕೆಲವು ಗಂಟೆಗಳ ಕಾಲ ಕಾದಿದ್ದರಿಂದ ಅವಳ ಸಹನೆಯ ಕಟ್ಟೆಯೊಡೆದಿರಬೇಕು. ಮೊದಲಿಗೆ ಸ್ವಯಂ ಗಾಯ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದವಳು ಕೊನೆಗೆ ವರುಣ್ ಗೆಳತಿ ನಟಾಶಾಳನ್ನು ಕೊಲ್ಲುವುದಾಗಿ ಬಡಬಡಿಸತೊಡಗಿದಳು. ಆಗ ಭದ್ರತಾ ತಂಡ ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದೆ.

 

Recent Comments

Leave Comments

footer
Top