• 19 April 2019 20:34
Jai Kannada
Jai Kannada
Blog single photo
April 07, 2019

ಭಾರತದಿಂದ ಮತ್ತೊಂದು ದಾಳಿ: ಪಾಕ್‌ಗೆ ಅನುಮಾನದ ಪಿಶಾಚಿ 

ಇಸ್ಲಾಮಾಬಾದ್: ಭಾರತ ಪಾಕಿಸ್ತಾನದ ನೆಲದ ಮೇಲೆ ಮತ್ತೊಂದು ದಾಳಿ ಮಾಡಲು ಯೋಜಿಸಿದೆಯಾ? ವಿದೇಶಾಂಗ ಸಚಿವ ಶಾಹ್ ಮಹಮ್ಮದ್ ಖುರೇಷಿಗೆ ಈ ರೀತಿಯ ಅನುಮಾನದ ಪಿಶಾಚಿ ಕಾಡುತ್ತಿದೆ. ಈ ತಿಂಗಳಲ್ಲಿ ಭಾರತ ದಾಳಿ ಮಾಡುವ ಬಗ್ಗೆ ನಂಬಲರ್ಹ ಗುಪ್ತಚರ ಮೂಲಗಳು ತಿಳಿಸಿವೆ ಎಂದು ಖುರೇಷಿ ಹೇಳಿದ್ದಾರೆ.

 ಏಪ್ರಿಲ್ 16 ಮತ್ತು 20ರ ನಡುವೆ ಈ ದಾಳಿ ನಡೆಯಬಹುದಾದ ಸಾಧ್ಯತೆಯಿದೆ ಎಂದು ಪ್ರತಿಪಾದಿಸಿದ ಅವರು  ಪಾಕಿಸ್ತಾನವು ವಿಶ್ವಸಂಸ್ಥೆ ಭದ್ರತಾ ಮಂಡಳಿಯ 5 ಕಾಯಂ ಸದಸ್ಯ ರಾಷ್ಟ್ರಗಳ ಎದುರು ತನ್ನ ಆತಂಕವನ್ನು ಬಿಚ್ಚಿಟ್ಟಿದೆ.

ಆದರೆ ಈ ರೀತಿಯ ಅಸಾಮಾನ್ಯ ಆರೋಪಕ್ಕೆ ಭಾರತದ ವಿದೇಶಾಂಗ ಸಚಿವಾಲಯ ಏನೂ ಉತ್ತರಿಸದೇ ಮೌನವಾಗಿದೆ.  ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ  ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವೇಷದ ಸ್ಥಿತಿ ಉಳಿದಿತ್ತು.

2 ವಾರಗಳ ಬಳಿಕ ಪಾಕಿಸ್ತಾನದ ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ಭಾರತ ಏರ್ ಸ್ಟ್ರೈಕ್ ಮಾಡಿತ್ತು. ಮರುದಿನವೇ ಜಮ್ಮು ಕಾಶ್ಮೀರದಲ್ಲಿ ಭಾರತದ ನೆಲೆಗಳ ಮೇಲೆ ವಾಯುದಾಳಿಗೆ ಪಾಕಿಸ್ತಾನದ ಯತ್ನವನ್ನು ಭಾರತ ವಿಫಲಗೊಳಿಸಿತ್ತು. ಆಗಿನಿಂದಲೂ ಉಭಯರಾಷ್ಟ್ರಗಳ ನಡುವೆ ದ್ವೇಷಮಯ ಪರಿಸ್ಥಿತಿ ಹಾಗೇ ಉಳಿದಿದೆ.

ಆದರೆ ಪಾಕಿಸ್ತಾನದ ವಿದೇಶಾಂಗ ಸಚಿವರ ಹೇಳಿಕೆಯು ಪಾಕಿಸ್ತಾನ ಯುದ್ಧಕ್ಕೆ ಪ್ರಚೋದನೆ ನೀಡುತ್ತಿದೆಯೇ ಎಂಬ ಅನುಮಾನಕ್ಕೆ ಎಡೆಮಾಡಿದೆ.  
 

Recent Comments

Leave Comments

footer
Top