• 19 April 2019 20:02
Jai Kannada
Jai Kannada
Blog single photo
April 06, 2019

ಕೊಹ್ಲಿ ನಾಯಕತ್ವ ವೈಫಲ್ಯಕ್ಕೆ ಸಾಕ್ಷಿಯಾದ ನೈಟ್ ರೈಡರ್ಸ್ ವಿರುದ್ಧದ ಸೋಲು 

ಬೆಂಗಳೂರು: ಐಪಿಎಲ್ ಟೂರ್ನಿಯಲ್ಲಿ ಸತತ ಸೋಲಿನ ಸುಳಿಗೆ ಸಿಕ್ಕಿಬಿದ್ದಿರುವ ಆರ್‌ಸಿಬಿ ತಂಡ ಅದರಿಂದ ಹೊರಬರಲಾಗದೇ ತಿಣುಕಾಡುತ್ತಿದೆ. ಬೆಂಗಳೂರಿನಲ್ಲಿ  ನಡೆದ ಐಪಿಎಲ್ ಪಂದ್ಯದಲ್ಲಿ ನೈಟ್ ರೈಡರ್ಸ್ ವಿರುದ್ಧ ಗೆದ್ದು, ಸೋಲಿನ ಸುಳಿಯಿಂದ ಹೊರಬರುವ ಪ್ರಯತ್ನವು ವಿಫಲಗೊಂಡಿದೆ. ಆಂಡ್ರೆ ರಸೆಲ್ ಅವರ 13 ಎಸೆತಗಳಲ್ಲಿ 48 ರನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನೈಟ್ ರೈಡರ್ಸ್ ಆರ್‌ಸಿಬಿಯ 205 ರನ್ ಸ್ಕೋರನ್ನು ಲೀಲಾಜಾಲವಾಗಿ ಮುಟ್ಟಿ ಗೆಲುವಿನ ಕೇಕೆ ಹಾಕಿತು.

ಇದರಿಂದ ನೈಟ್ ರೈಡರ್ಸ್ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದರೆ ಆರ್‌ಸಿಬಿ ಸತತ ಐದು ಸೋಲುಗಳಿಂದ ಪಾಯಿಂಟ್ ಪಟ್ಟಿಯಲ್ಲಿ ಕಡೆಯ ಸ್ಥಾನದಲ್ಲೇ ಉಳಿದಿದೆ. ಕೊನೆಯ ಓವರುಗಳಲ್ಲಿ ವಿರಾಟ್ ಕೊಹ್ಲಿ ಅವರ ತಪ್ಪು ನಡೆಗಳಿಂದ ಆರ್‌ಸಿಬಿ ಸೋಲುನುಭವಿಸಿತೆಂದೇ ಹೇಳಬಹುದು. ರಸೆಲ್‌ನಂತ ಎದುರಾಳಿಗೆ ಬೌಲ್ ಮಾಡುವುದದಕ್ಕೆ ವಿರಾಟ್ ಕೊಹ್ಲಿ ವೇಗದ ಬೌಲರುಗಳಿಗೆ ಅವಕಾಶ ಕೊಟ್ಟಿದ್ದು ತಪ್ಪೆನಿಸಿತ್ತು. ಕಡೆಯ ಎರಡು ಓವರುಗಳನ್ನು ನೇಗಿ ಮತ್ತು ಚಹಲ್ ಮುಂತಾದ ಸ್ಪಿನ್ನರುಗಳಿಗೆ ಕೊಟ್ಟಿದ್ದರೆ ರಸೆಲ್ ಬ್ಯಾಟಿಂಗ್ ಅಬ್ಬರವನ್ನು ತಪ್ಪಿಸಬಹುದಾದ ಸಾಧ್ಯತೆಯಿತ್ತು. ಇದರಲ್ಲಿ ವಿರಾಟ್ ಕೊಹ್ಲಿಯ ನಾಯಕತ್ವದ ವೈಫಲ್ಯವು ಎದ್ದುಕಾಣುವಂತಿದೆ. 

 ಆಂಡ್ರೆ ರಸೆಲ್ ಏಳು ಸಿಕ್ಸರುಗಳು ಮತ್ತು ಒಂದು ಬೌಂಡರಿಯೊಂದಿಗೆ ಬೆಂಗಳೂರಿನ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದರು. ಶುಬಮ್ ಗಿಲ್ ಜಯದ ರನ್ ಸ್ಕೋರ್ ಮಾಡಿ 5 ಎಸೆತಗಳು ಬಾಕಿವುಳಿದಿರುವಂತೆ ಗೆಲುವಿನ ದಡವನ್ನು ಮುಟ್ಟಿದರು.

24 ಎಸೆತಗಳಲ್ಲಿ ನೈಟ್ ರೈಡರ್ಸ್‌ಗೆ 66 ರನ್ ಅವಶ್ಯಕತೆಯಿತ್ತು. ಆರ್‌ಸಿಬಿ ಪಾಳೆಯಲ್ಲಿ ಈ ಪಂದ್ಯದಲ್ಲಿ ಗೆಲ್ಲುವ ಆಶಾಭಾವನೆ ಚಿಗುರಿತ್ತು. ಆದರೆ ರಸೆಲ್ ‌ ಸ್ಫೋಟಕ ರನ್‌ಗಳನ್ನು ಸಿಡಿಸಿದಾಗ ಆರ್‌ಸಿಬಿ ಗೆಲುವಿನ ಆಸೆ ಕಮರಿಹೋಗಿತ್ತು. ಆರ್‌ಸಿಬಿ ಮೊದಲಿಗೆ ಬ್ಯಾಟಿಂಗ್ ಮಾಡಿ ವಿರಾಟ್ ಕೊಹ್ಲಿ ಅವರ 84 ರನ್ ಮತ್ತು ಡಿ ವಿಲಿಯರ್ಸ್ ಅವರ 32 ರನ್ ನೆರವಿನಿಂದ 205 ರನ್ ಉತ್ತಮ ಸ್ಕೋರನ್ನು ಆರ್‌ಸಿಬಿ ಮಾಡಲು ನೆರವಾಗಿದ್ದರು.


 

Recent Comments

Leave Comments

footer
Top