• 19 April 2019 20:01
Jai Kannada
Jai Kannada
Blog single photo
April 05, 2019

ಕಾಂಪ್ರೊಮೈಸ್, ಒನ್ ನೈಟ್ ಪದಗಳಿಗೆ ನಟಿ ಶ್ರುತಿ ಮರಾಟೆ ತಕ್ಕ ಪ್ರತ್ಯುತ್ತರ 

ಮುಂಬೈ: ಮರಾಠಿ ನಟಿ ಶ್ರುತಿ ಮರಾಟೆ ಹ್ಯೂಮನ್ಸ್ ಆಫ್ ಬಾಂಬೆ ಜತೆ ಸಂವಾದದಲ್ಲಿ ಚಿತ್ರಜಗತ್ತಿನ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ, ಮರಾಠಿ ಚಿತ್ರಗಳಲ್ಲಿ ಪ್ರಮುುಖವಾಗಿ ನಟಿಸುವ ನಟಿ ಕ್ಯಾಸ್ಟಿಂಗ್ ಕೌಚ್ ಮತ್ತು ಟ್ರಾಲಿಂಗ್ ಬಗ್ಗೆ ಹೊರಜಗತ್ತಿಗೆ ತೆರೆದಿಟ್ಟಿದ್ದಾರೆ.
ನನ್ನ ವೃತ್ತಿ ಜೀವನದ ಆರಂಭದಲ್ಲಿ, ತಮಿಳು ಚಿತ್ರವೊಂದರಲ್ಲಿ ಬಿಕಿನಿ ಧರಿಸುವಂತೆ ಕೇಳಲಾಯಿತು. ನಾನು ಎರಡು ಬಾರಿ ಯೋಚಿಸದೇ ಕೂಡಲೇ ಒಪ್ಪಿಕೊಂಡೆ. ಅದನ್ನು ಹೇಗೆ ಶೂಟ್ ಮಾಡುತ್ತೀರಿ,

ಅದರ ಅಗತ್ಯವಿದೆಯಾ ಮುಂತಾದ ಪ್ರಶ್ನೆಗಳು ನನ್ನ ಮನಸ್ಸನ್ನು ಸುಳಿಯಲಿಲ್ಲ. ನನಗೆ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದೇ ಹೆಚ್ಚೆಂದು ಭಾವಿಸಿದೆ. ಆದರೆ ಬಿಕಿನಿ ದೃಶ್ಯ ಒಂದುವರ್ಷದ ಬಳಿಕ ಶ್ರುತಿಗೆ ದುಃಸ್ವಪ್ನವಾಗಿ ಕಾಡಿತು. ನನ್ನ ಜನಪ್ರಿಯತೆ ಹೆಚ್ಚಿದಂತೆಲ್ಲಾ ಬಿಕಿನಿ ದೃಶ್ಯದಲ್ಲಿ ನಾನು ನಟಿಸಿದ ಬಗ್ಗೆಯೇ ಜನರು ಟ್ರಾಲ್ ಮಾಡಲಾರಂಭಿಸಿದ್ದರು. ನಾನು ಚಿತ್ರದಲ್ಲಿ ಕಂಡ ರೀತಿ ಮತ್ತು ಅದನ್ನು ಹೇಗೆ ಚಿತ್ರಿಸಲಾಯಿತು ಎನ್ನುವ ಬಗ್ಗೆ ಟ್ರಾಲ್ ಮಾಡಲಾಯಿತು. ಇದು ನಿಮ್ಮ ಆತ್ಮಗೌರವಕ್ಕೆ ಎಷ್ಟು ಹಾನಿ ಮಾಡಿತೆಂದು ಗೊತ್ತೇ ಎಂದು ಶ್ರುತಿ ಬಹಿರಂಗಪಡಿಸಿದರು.

 ಶ್ರುತಿ ತಮ್ಮ ಕ್ಯಾಸ್ಟಿಂಗ್ ಕೌಚ್ ಅನುಭವವನ್ನು ಕೂಡ ಬಿಚ್ಚಿಟ್ಟರು. ಒಮ್ಮೆ ನನಗೆ ಪ್ರಮುಖ ಪಾತ್ರ ನೀಡುವುದಾಗಿ ಹೇಳಿದ ನಿರ್ಮಾಪಕರನ್ನು ಭೇಟಿ ಮಾಡಿದೆ. ಮೊದಲಿಗೆ ಅವರು ವೃತ್ತಿಪರರಂತೆ ವರ್ತಿಸಿದರೂ ಬಳಿಕ ಶೀಘ್ರದಲ್ಲೇ ಕಾಂಪ್ರೋಮೈಸ್, ಒನ್ ನೈಟ್ ಮೊದಲಾದ ಪದಗಳನ್ನು ಬಳಸಲಾರಂಭಿಸಿದರು. ಆಗ ನಾನು ನಿಮ್ಮ ಜತೆ ಮಲಗಬೇಕೆಂದು ನೀವು ಬಯಸುವಿರಾದರೆ, ಹೀರೊ ಯಾರ ಜತೆ ಮಲಗುತ್ತಾರೆ ಎಂದು ಕೇಳಿದಾಗ ಅವರು ಸ್ತಂಬೀಭೂತರಾಗಿದ್ದರು.

ಅವರ ವರ್ತನೆ ಬಗ್ಗೆ ಉಳಿದವರಿಗೆ ತಕ್ಷಣವೇ ಮಾಹಿತಿ ನೀಡಿದ ಬಳಿಕ ಪ್ರಾಜೆಕ್ಟ್ ಬಿಟ್ಟುಹೋಗುವಂತೆ ನಿರ್ಮಾಪಕರಿಗೆ ತಿಳಿಸಿದ್ದಾಗಿ ಶ್ರುತಿ ಹೇಳಿದರು. ನೆಟಿಜನ್ನರು ಶ್ರುತಿಯ ಪೋಸ್ಟ್‌ಗೆ ಶ್ಲಾಘನೆ ವ್ಯಕ್ತಪಡಿಸಿದ್ದು,  ಕಷ್ಟದ ದುಡಿಮೆ ಮತ್ತು ನಿರ್ಭಯವಾಗಿ ಇರುವುದಕ್ಕಿಂತ ಯಾವುದೂ ಹೆಚ್ಚಲ್ಲ ಎಂದು ಒಬ್ಬ ಇನ್‌ಸ್ಟಾಗ್ರಾಂ ಬಳಕೆದಾರ ಬರೆದಿದ್ದಾನೆ. 

Recent Comments

Leave Comments

footer
Top