• 19 April 2019 19:59
Jai Kannada
Jai Kannada
Blog single photo
April 05, 2019

ಬಾಡಿಗೆ ಪಾವತಿಗಿಂತ ಗೃಹ ಸಾಲದ ಮೇಲಿನ ಇಎಂಐ ಕಡಿಮೆ ಮಾಡುವ ಬಯಕೆ: ಅರುಣ್ ಜೇಟ್ಲಿ 

ನವದೆಹಲಿ:  ಬಾಡಿಗೆ ಪಾವತಿ ಮಾಡುವುದಕ್ಕಿಂತ ಸಮಾನ ಮಾಸಿಕ ಕಂತುಗಳ ಪಾವತಿ ಅಗ್ಗವಾಗುವಂತೆ ಗೃಹ ಸಾಲದ ಮೇಲಿನ ಬಡ್ಡಿದರದ ಮಟ್ಟವನ್ನು ಕಡಿಮೆ ಮಾಡಲು ಸರ್ಕಾರ ಬಯಸಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ತಿಳಿಸಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎರಡು ತಿಂಗಳಲ್ಲಿ ಎರಡನೇ ಬಾರಿಗೆ ರೆಪೊ ದರವನ್ನು ತಗ್ಗಿಸಿದ ಬಳಿಕ ಹಣಕಾಸು ಸಚಿವರ ಹೇಳಿಕೆ ಹೊರಬಿದ್ದಿದೆ.

ವಾಣಿಜ್ಯ ಬ್ಯಾಂಕುಗಳು ಆರ್‌ಬಿಐ ದರ ಕಡಿತಗಳಿಗೆ ಸ್ಪಂದಿಸಿ ತರುವಾಯ ಗ್ರಾಹಕರಿಗೆ ಕಡಿಮೆ ಬಡ್ಡಿದರಗಳ ಸೌಲಭ್ಯವನ್ನು ವರ್ಗಾಯಿಸುತ್ತವೆ ಎಂದು ಜೇಟ್ಲಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಬ್ಯಾಂಕುಗಳು ನಿಧಿಯ ಕನಿಷ್ಠ ವೆಚ್ಚ ಆಧಾರಿತ ಸಾಲ ದರವನ್ನು ಪುನರ್ಪರಿಶೀಲನೆ ಮಾಡುವುದರಿಂದ ಅವುಗಳ ನಿರ್ಧಾರಕ್ಕಾಗಿ ಕಾಯಬೇಕಾಗಿದೆ ಎಂದು ಜೇಟ್ಲಿ ಹೇಳಿದರು.

ರಿಸರ್ವ್ ಬ್ಯಾಂಕ್ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ ತಗ್ಗಿಸಿರುವುದರಿಂದ ಕಡಿಮೆ ಬಡ್ಡಿದರದಿಂದ ಗೃಹ ಸಾಲದ ಬಡ್ಡಿ ದರಗಳು ಕೂಡ ಅಗ್ಗವಾಗಿ ಆರ್ಥಿಕ ಬೆಳವಣಿಗೆಗೆ ಉತ್ತೇಜಿಸುವ ಗ್ರಾಹಕ ಬೇಡಿಕೆಯನ್ನು ಸೃಷ್ಟಿಸುತ್ತದೆ.

Recent Comments

Leave Comments

footer
Top