• 19 April 2019 20:42
Jai Kannada
Jai Kannada
Blog single photo
April 04, 2019

ಬಿಸಿಸಿಐ ನಿರ್ಧಾರಕ್ಕೆ ಕಾಯುತ್ತಿರುವ ಶ್ರೀಶಾಂತ್ ನಾಚ್ ಬಲಿಯಾಗೆ ಅನುಮತಿ ಕೊಟ್ಟಿಲ್ಲ 

ಮುಂಬೈ: ಮಾಜಿ ಕ್ರಿಕೆಟರ್ ಶ್ರೀಶಾಂತ್ ಶೋಬಿಜ್‌ನಲ್ಲಿ ಕೂಡ ತೊಡಗಿಕೊಂಡಿದ್ದು, ಡ್ಯಾನ್ಸ್ ರಿಯಾಲಿಟಿ ಶೋ ನಾಚ್ ಬಲಿಯಾದಲ್ಲಿ ಅವರ ಪತ್ನಿ ಜತೆ ಭಾಗವಹಿಸುವಂತೆ ಆಫರ್ ಬಂದಿದೆ. ಆದರೆ ಬಿಸಿಸಿಐ ನಿರ್ಧಾರಕ್ಕೆ ಕಾಯುತ್ತಿರುವುದರಿಂದ ಅದರಲ್ಲಿ ಭಾಗವಹಿಸುವ ಬಗ್ಗೆ ಅನುಮತಿ ನೀಡಿಲ್ಲ ಎಂದು ಶ್ರೀಶಾಂತ್ ಹೇಳಿದ್ದಾರೆ.

2013ರ ಐಪಿಎಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪದ ಮೇಲೆ ಬಿಸಿಸಿಐ ನೀಡಿದ್ದ ಜೀವಮಾನ ನಿಷೇಧವನ್ನು ಸುಪ್ರೀಂಕೋರ್ಟ್ ತೆರವು ಮಾಡಿ, ಅವರ ಶಿಕ್ಷೆ ಮರುಪರಿಶೀಲನೆ ಮಾಡುವಂತೆ ಬಿಸಿಸಿಐಗೆ ತಿಳಿಸಿತ್ತು.

ಶ್ರೀಶಾಂತ್ ಇದಕ್ಕೆ ಮುಂಚೆ ಬಿಗ್ ಬಾಸ್, ಜಲಕ್ ದಿಕಾಲಾ ಜಾ ಮತ್ತು ಕಾಟ್ರೋನ್ ಕೆ ಖಿಲಾಡಿ ಮುಂತಾದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದು, ಈಗ ಬಿಸಿಸಿಐ ನಿರ್ಧಾರಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.

ಬಿಸಿಸಿಐ ನಿರ್ಧಾರವು ಯಾವುದೇ ಸಮಯದಲ್ಲಿ ಬರಬಹುದು ಮತ್ತು ನಾಚ್ ಬಾಲಿಯೇ ಶೋ 3-4 ತಿಂಗಳವರೆಗೆ ಮುಂದುವರಿಯುತ್ತದೆ. ಆದ್ದರಿಂದ ಯಾರಿಗಾದರೂ ಈಗಲೇ  ಬದ್ಧರಾಗಿರುವುದು ಕಷ್ಟ ಎಂದು ಶ್ರೀಶಾಂತ್ ಹೇಳಿದ್ದಾರೆ.
ಸುಪ್ರೀಂಕೋರ್ಟ್ ಅವರಿಗೆ ಬಿಸಿಸಿಐ ವಿಧಿಸಿದ್ದ ಜೀವಮಾನದ ನಿಷೇಧವನ್ನು ರದ್ದು ಮಾಡಿ ಶ್ರೀಶಾಂತ್ ಶಿಕ್ಷೆಯ ಪ್ರಮಾಣವನ್ನು ಪರಿಶೀಲಿಸುವಂತೆ ಬಿಸಿಸಿಐಗೆ ಸಲಹೆ ಮಾಡಿತ್ತು.

Recent Comments

Leave Comments

footer
Top