• 19 November 2018 06:26
Jai Kannada
Jai Kannada
Blog single photo
January 02, 2018

ಇರಾನ್‌ನಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ 10 ಜನರ ಬಲಿ 

ಟೆಹ್ರಾನ್: ಅರಬ್ ರಾಷ್ಟ್ರಗಳಲ್ಲಿ  ಭ್ರಷ್ಟ ಸರ್ಕಾರಗಳ ವಿರುದ್ಧ, ಅಸಮರ್ಥ ಸರ್ಕಾರಗಳ ವಿರುದ್ಧ ಜನರು ದಂಗೆಯೆದ್ದು ಉರುಳಿಸಿದರು. ಈ ರಾಷ್ಟ್ರಗಳ ಸಾಲಿನಲ್ಲಿ ಇರಾನ್ ಕೂಡ ಸೇರುವ ಶಂಕೆ ಆವರಿಸಿದೆ. ಅದಕ್ಕೆ ಕಾರಣ ಇರಾನ್‌ನಾದ್ಯಂತ ಪ್ರತಿಭಟನೆಯ ಕಿಚ್ಚು ಭುಗಿಲೆದ್ದಿರುವುದು.

ಶಸ್ತ್ರಸಜ್ಜಿತ ಪ್ರತಿಭಟನೆಕಾರರು ಮಿಲಿಟರಿ ನೆಲೆಗಳು ಮತ್ತು ಪೊಲೀಸ್ ಠಾಣೆಗಳ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಭದ್ರತಾಪಡೆಗಳು ಪ್ರತಿದಾಳಿ ಮಾಡಿದ್ದರಿಂದ 10 ಜನರು ಅಸುನೀಗಿದ್ದಾರೆ.
 2009 ವಿವಾದಾತ್ಮಕ ಅಧ್ಯಕ್ಷೀಯ ಚುನಾವಣೆ ಬಳಿಕ ಇರಾನ್‌ನಲ್ಲಿ ನಡೆದ ದೊಡ್ಡ ಪ್ರತಿಭಟನೆ ಇದಾಗಿದೆ.

ದರಿಂದ ಕಳೆದ 5 ದಿನಗಳಿಂದ ದೇಶದಲ್ಲಿ ಪ್ರಕ್ಷುಬ್ಧತೆ ತಲೆದೋರಿದ್ದು, ಪೊಲೀಸ್ ಅಧಿಕಾರಿಯೊಬ್ಬರ ಹತ್ಯೆಯೊಂದಿಗೆ ಒಟ್ಟು 13 ಜನರು ಹತರಾಗಿದ್ದಾರೆ. ಇರಾನ್ ಆರ್ಥಿಕತೆ ದುರ್ಬಲವಾಗಿದ್ದು, ಆಹಾರ ಪದಾರ್ಥಗಳ ಬೆಲೆ ಜಿಗಿತದಿಂದಾಗಿ ಜನರು ರೊಚ್ಚಿಗೆದ್ದಿದ್ದಾರೆ.

ತಮ್ಮ ಕೋಪಾಗ್ನಿಯನ್ನು ತೋರಿಸಲು  ಜನರಿಂದ ಪ್ರತಿಭಟನೆ ಷುರುವಾಗಿದ್ದು, ಅನೇಕ ನಗರಗಳಿಗೆ ಪ್ರತಿಭಟನೆಯ ಬಿಸಿ ತಟ್ಟಿದೆ. ಖಾಸಗಿ ಬ್ಯಾಂಕಿನಲ್ಲಿ ದಾಂಧಲೆ, ಮುರಿದ ಕಿಟಕಿಗಳು, ತಲೆಕೆಳಗಾದ ಕಾರುಗಳು ಮತ್ತು ಬೆಂಕಿಗಾಹುತಿಯಾದ ಅಗ್ನಿಶಾಮಕ ವಾಹನ ಇವು ಇರಾನ್ ಸ್ಟೇಟ್ ಟೆಲಿವಿಷನ್ ಪ್ರಸಾರ ಮಾಡಿದ ಫೂಟೇಜ್ ದೃಶ್ಯಗಳು.

Recent Comments

Leave Comments

footer
Top