• 19 April 2019 20:02
Jai Kannada
Jai Kannada
Blog single photo
April 04, 2019

 ಆರ್‌ಬಿಐ ರೆಪೊ ದರ  ಕಡಿತ: ಸಾಲಗಳ ಮೇಲಿನ ಇಎಂಐ ಕುಸಿತದ ನಿರೀಕ್ಷೆ 

ಮುಂಬೈ: ತನ್ನ ಮೊದಲ ದ್ವೈಮಾಸಿಕ ವಿತ್ತೀಯ ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಗುರುವಾರ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ ಅಥವಾ 0.25 ಶೇಕಡ ಕಡಿತ ಮಾಡಿ ಶೇ. 6ಕ್ಕೆ ಇಳಿಸಲು ನಿರ್ಧರಿಸಿದೆ. ಶಕ್ತಿಕಾಂತ ದಾಸ್ ನೇತೃತ್ವದಲ್ಲಿ ಆರ್‌ಬಿಐನ 7 ಸದಸ್ಯರ ದರ ನಿಗದಿಪಡಿಸುವ ಸಮಿತಿಯು ಮಂಗಳವಾರ ತನ್ನ 3 ದಿನಗಳ ವಿತ್ತೀಯ ನೀತಿ ಸಭೆ ಆರಂಭಿಸಿತ್ತು.

ಚುನಾವಣೆ ಸೀಸನ್‌ನಲ್ಲಿ ಬಡ್ಡಿದರ ಕಡಿತದಿಂದ ಸಾಲಗಾರರಿಗೆ ಸ್ವಲ್ಪ ಪರಿಹಾರ ಸಿಕ್ಕಂತಾಗುತ್ತದೆ.  ಆರ್‌ಬಿಐನ ವಿತ್ತೀಯ ನೀತಿ ನಿಲುವನ್ನು ಆಧರಿಸಿ ಬ್ಯಾಂಕುಗಳು ಸಾಲಗಳ ಮೇಲೆ ಬಡ್ಡಿ ದರ ಏರಿಸುತ್ತದೆ ಅಥವಾ ಕಡಿತಮಾಡುತ್ತದೆ. ಉದಾಹರಣೆಗೆ, ರಿಸರ್ವ್ ಬ್ಯಾಂಕ್ ರೆಪೊ ದರ ಕಡಿಮೆಮಾಡಿದರೆ ಬ್ಯಾಂಕುಗಳು ಇದರ ಅನುಕೂಲವನ್ನು ಗ್ರಾಹಕರ ಮೇಲೆ ವರ್ಗಾಯಿಸುತ್ತದೆಂದು ನಿರೀಕ್ಷಿಸಲಾಗಿದೆ.

ರೆಪೊ ದರ ಕಡಿತದಿಂದ ಗೃಹಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲಗಳ ಮೇಲಿನ ಸಮಾನ ಮಾಸಿಕ ಕಂತುಗಳ ಬಡ್ಡಿದರಗಳಲ್ಲಿ ಕೂಡ ಕಡಿತ ಮಾಡಬಹುದೆಂದು ನಿರೀಕ್ಷಿಸಲಾಗಿದೆ. 
 

Recent Comments

Leave Comments

footer
Top