• 19 November 2018 07:01
Jai Kannada
Jai Kannada
Blog single photo
January 02, 2018

ಮಾಜಿ ಸೈನಿಕನಿಂದ 2 ಗಂಟೆಯಲ್ಲಿ 6 ಕೊಲೆಗಳು

ಚಂದೀಗಢ: ಮಾಜಿ ಸೈನಿಕನೊಬ್ಬ 6 ಜನರನ್ನು ಕೇವಲ 2 ಗಂಟೆಗಳ ಅವಧಿಯಲ್ಲಿ ಕಬ್ಬಿಣದ ರಾಡ್‌ನಿಂದ ಹೊಡೆದು ಹತ್ಯೆ ಮಾಡಿದ ಘೋರ ಘಟನೆ ಹರ್ಯಾಣದ ಪಲ್ವಾಲ್ ಪಟ್ಟಣದಲ್ಲಿ ನಡೆದಿದೆ.

ಮಾನಸಿಕ ಅಸ್ವಸ್ಥನೆಂದು ನಂಬಲಾದ ಈ ಆರೋಪಿ ಇಂತಹ ವಿಕೃತ ಕೃತ್ಯವೆಸಗಿದ್ದು ಪೊಲೀಸರು ಅವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾನಸಿಕ ವಿಕಲ್ಪ ಮನಸ್ಥಿತಿಯೇ ಈ ಹತ್ಯೆಗೆ ಕಾರಣವೆಂದು ತಿಳಿದುಬಂದಿದೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ನರೇಶ್ ಪರಿಚಾರಕನೊಬ್ಬನ ಮೇಲೆ ರಾಡ್‌ನಿಂದ ಹಲ್ಲೆ ಮಾಡಿ ಹತ್ಯೆಗೈದ. ಆರೋಪಿಯ ಮಾನಸಿಕ ವಿಕಲ್ಪ ಸ್ಥಿತಿಯಲ್ಲಿ ತಾನು ಏನು ಮಾಡುತ್ತಿದ್ದೇನೆಂಬ ಅರಿವಿಲ್ಲದೇ  ದುರದೃಷ್ಟವಶಾತ್ ಅವನ ಎದುರಿಗೆ  ಸಿಕ್ಕಿದವರನ್ನೆಲ್ಲಾ ಕೊಲೆ ಮಾಡುತ್ತಾ ಹೋದ. ಹತ್ಯೆಯಾದ ಮಾಹಿತಿ ಪೊಲೀಸರಿಗೆ ಮುಟ್ಟಿದ ಕೂಡಲೇ ಅಲ್ಲಿಗೆ ಧಾವಿಸಿದ ಪೊಲೀಸರು ಶವವನ್ನು ಆಸ್ಪತ್ರೆ ಹೊರಗೆ ಮಲಗಿಸಿದ್ದನ್ನು  ಕಂಡರು. ಶವವನ್ನು ಶವಾಗಾರಕ್ಕೆ ಸಾಗಿಸುವಷ್ಟರಲ್ಲಿ  ಮಹಿಳಾ ಪರಿಚಾರಿಕೆ ಕೊಲೆಯಾಗಿರುವ ಬಗ್ಗೆ ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದರು.

 ಹತ್ಯೆಕೋರನನ್ನು ಪೊಲೀಸರು ಸಿಸಿಟಿವಿ ಕ್ಯಾಮೆರಾಗಳ ಫೂಟೇಜ್‌ನಿಂದ ಗುರುತಿಸಿ, ಅವನನ್ನು ಹಿಡಿಯಲು ಬಲೆ ಬೀಸುವಷ್ಟರಲ್ಲಿ  ಹಂತಕ ಒಂದಾದ ನಂತರ ಇನ್ನೊಂದು ನಾಲ್ಕು ಸರಣಿ ಹತ್ಯೆಗಳನ್ನು ನಡೆಸಿದ್ದ.

ಹಾತಿನ್‌ನ ಅಂಜುಮ್, ಮುನ್ಶಿರಾಮ್, ಸೀತಾ ರಾಮ್ ಮತ್ತು ಪಲ್ವಾಲ್‌ನ ಕೇಮ್ ಚಂದ್, ಫಿರೋಜಾಬಾದ್ ಸುಬಾಶ್ ಎಂದು ಮೃತರನ್ನು ಗುರುತಿಸಲಾಗಿದೆ.

ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದ ಮತ್ತು ಕುಟುಂಬದ ಜತೆ ಅವನ ಸಂಬಂಧ ಚೆನ್ನಾಗಿರಲಿಲ್ಲ ಎಂದು ಒಮಾಕ್ಸೆ ನಗರದ ನಿವಾಸಿಯೊಬ್ಬ ತಿಳಿಸಿದ್ದಾನೆ. ನಮ್ಮ ನಡುವೆ ವಾಸಿಸಿದ್ದ ವ್ಯಕ್ತಿ ಇಂತಹ ಹೇಯ ಹತ್ಯಾಕಾಂಡ ನಡೆಸಿದ್ದು ಆಘಾತಕಾರಿ ಎಂದು ಅವನು ಪ್ರತಿಕ್ರಿಯಿಸಿದ್ದಾರೆ.

Recent Comments

Leave Comments

footer
Top