• 19 April 2019 20:39
Jai Kannada
Jai Kannada
Blog single photo
April 03, 2019

 ಬಿಎಸ್ಸೆನ್ನೆಲ್‌ನಿಂದ 54000 ನೌಕರರ ಲೇಆಫ್ ಸಂಭವ

ನವದೆಹಲಿ: ಟೆಲಿಕಾಂ ನಿರ್ವಾಹಕ ಕಂಪನಿ ಬಿಎಸ್ಸೆನ್ನೆಲ್‌ನ 54,000 ನೌಕರರು ಕೆಲಸ ಕಳೆದುಕೊಳ್ಳುವ ಸಂಭವವಿದೆ. ಕಂಪನಿಯ ಆಡಳಿತ ಮಂಡಳಿ 54000 ನೌಕರರಿಗೆ ಲೇ ಆಫ್ ನೀಡಲು ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ. ಚುನಾವಣೆ ಬಳಿಕ ಮಂಡಳಿ ಅಂತಿಮ  ನಿರ್ಧಾರ ತೆಗೆದುಕೊಳ್ಳಲಿದೆ. ಚುನಾವಣೆ ಸಂದರ್ಭದಲ್ಲಿ ವಿಆರ್‌ಎಸ್ ಪ್ಯಾಕೇಜ್ ಅಥವಾ ಉದ್ಯೋಗ ಕಡಿತ ಪ್ರಕಟಿಸುವುದು ಮತ್ತು ಟೆಲಿಕಾಂ ಸಂಸ್ಥೆಯ ವ್ಯವಹಾರಗಳನ್ನು ಮುಚ್ಚುವುದು ಉದ್ಯೋಗಿಗಳ ಮೇಲೆ ಭಾರೀ ಪರಿಣಾಮ ಬೀರುವುದರಿಂದ ಟೆಲಿಕಾಂ ಇಲಾಖೆ ಕಾದು ನೋಡುವ ನಿರ್ಧಾರ ತೆಗೆದುಕೊಂಡಿದೆ.

ಬಿಎಸ್ಸೆನ್ನೆಲ್ ಮಂಡಳಿಯು ನಿವೃತ್ತಿ ವಯಸ್ಸನ್ನು 60ರಿಂದ58 ಕ್ಕೆ ಕಡಿತಗೊಳಿಸುವುದು, 50 ವರ್ಷಕ್ಕಿಂತ ಹೆಚ್ಚಿನ ಎಲ್ಲಾ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆ ಮತ್ತು ಬಿಎಸ್ಸೆನ್ನೆಲ್‌ಗೆ 4ಜಿ ತರಂಗಾಂತರ ಹಂಚಿಕೆಯನ್ನು ತ್ವರಿತಗೊಳಿಸುವ ಶಿಫಾರಸುಗಳಿಗೆ ಒಪ್ಪಿಗೆ ಸೂಚಿಸಿದೆ. ನಿವೃತ್ತಿ ವಯಸ್ಸು ಮತ್ತು ವಿಆರ್‌ಎಸ್ ನಿರ್ಧಾರಗಳಿಂದ 54, 451 ನೌಕರರು ಕಂಪನಿಯಿಂದ ಹೊರಬೀಳುತ್ತಾರೆ.

ಅದು ಕಂಪನಿಯ 174, 312 ನೌಕರರ ಶಕ್ತಿಯಲ್ಲಿ ಶೇ. 31ರಷ್ಟಾಗಿದೆ. ನಿವೃತ್ತಿ ವಯಸ್ಸನ್ನು ಕಡಿತಗೊಳಿಸುವ ನಿರ್ಧಾರದಿಂದ ನೌಕರರ ಸಂಖ್ಯೆಯನ್ನು 33, 568 ರಷ್ಟು ತಗ್ಗಿಸಬಹುದು ಮತ್ತು ಇದರಿಂದ ಸಂಸ್ಥೆಗೆ ವೇತನ ಬಿಲ್‌ನಲ್ಲಿ  13895 ಕೋಟಿ ರೂ. ಉಳಿತಾಯವಾಗುತ್ತದೆ. 
 

Recent Comments

Leave Comments

footer
Top