• 19 April 2019 20:15
Jai Kannada
Jai Kannada
Blog single photo
April 02, 2019

ಬ್ಯಾಂಕುಗಳಿಗೆ ಏಪ್ರಿಲ್ ತಿಂಗಳು ಸಾಲು, ಸಾಲು ರಜೆಗಳು, 11 ದಿನಗಳು ಬಂದ್ 

ಬೆಂಗಳೂರು: ಬ್ಯಾಂಕುಗಳಿಗೆ ಏಪ್ರಿಲ್ ತಿಂಗಳಲ್ಲಿ ಸಾಲು, ಸಾಲು ರಜೆಯಿರುವುದರಿಂದ ತುರ್ತು ಕೆಲಸವಿರುವ ಗ್ರಾಹಕರು ಮುಂಚಿತವಾಗಿ ತಮ್ಮ ಕೆಲಸಗಳನ್ನು ಪೂರೈಸಬೇಕು. ಸಮಯಾಭಾವದಿಂದ ಸಕಾಲದಲ್ಲಿ ಕೆಲಸ ನೆರವೇರುವುದು ಕಷ್ಟವಾಗಬಹುದು. ವಿವಿಧ ರಜೆಗಳಿಗಾಗಿ ಬ್ಯಾಂಕು ಏಪ್ರಿಲ್ ತಿಂಗಳಲ್ಲಿ 11 ದಿನಗಳ ಕಾಲ ಬಂದ್ ಆಗಲಿವೆ

ಏಪ್ರಿಲ್ ಒಂದು ಹಣಕಾಸು ಲೆಕ್ಕ ಅಂತಿಮಗೊಳಿಸುವ ದಿನ. ಏಪ್ರಿಲ್ 6ರಂದು ಯುಗಾದಿ ಪ್ರಯುಕ್ತ ಬ್ಯಾಂಕುಗಳಿಗೆ ರಜೆ. ಏಪ್ರಿಲ್ 7 ಭಾನುವಾರ ಮತ್ತು ಏಪ್ರಿಲ್ 13ರಂದು ಎರಡನೇ ಶನಿವಾರವಾದ್ದರಿಂದ ಮುಚ್ಚಲಾಗುತ್ತದೆ. ಏಪ್ರಿಲ್ 17ರಂದು ಮಹಾವೀರ ಜಯಂತಿ ರಜಾದಿನ  ಏಪ್ರಿಲ್ 18ರಂದು ಮೊದಲ ಹಂತದ ಚುನಾವಣೆ, ಏಪ್ರಿಲ್ 19ರಂದು ಗುಡ್ ಫ್ರೈಡೆ, ಏಪ್ರಿಲ್ 21 ಭಾನುವಾರ ಈ ದಿನಗಳಲ್ಲಿ ಬ್ಯಾಂಕ್ ಕಾರ್ಯನಿರ್ಹಿಸುವುದಿಲ್ಲ.

 ಏಪ್ರಿಲ್ 23ರಂದು ಎರಡನೇ ಹಂತದ ಚುನಾವಣೆಗಳಿರುವ ಕಡೆಗಳಲ್ಲಿ ಬ್ಯಾಂಕ್ ಕೆಲಸ ನಿರ್ವಹಿಸುವುದಿಲ್ಲ. ಏಪ್ರಿಲ್ 27 ಮತ್ತು 28 ನಾಲ್ಕನೇ ಶನಿವಾರ ಮತ್ತು ಭಾನುವಾರ ಬ್ಯಾಂಕುಗಳು ವ್ಯವಹಾರ ಮಾಡುವುದಿಲ್ಲ.

Recent Comments

Leave Comments

footer
Top