• 19 April 2019 20:02
Jai Kannada
Jai Kannada
Blog single photo
April 02, 2019

ಇಡೀ ರಾಷ್ಟ್ರದ ಜನರ ಧ್ವನಿ ಬಿಂಬಿಸುವ ಪ್ರಣಾಳಿಕೆ: ರಾಹುಲ್  

ನವದೆಹಲಿ: ಕಾಂಗ್ರೆಸ್ ಪಕ್ಷವು ಮಂಗಳವಾರ 2019ನೇ ಲೋಕಸಭೆ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
 ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಅಕ್ಬರ್ ರಸ್ತೆ ಮುಖ್ಯಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದರು

ಪ್ರಣಾಳಿಕೆಯು ಜನರ ಧ್ವನಿಯನ್ನು ಬಿಂಬಿಸುತ್ತದೆ. ಕೇವಲ ಒಬ್ಬ ವ್ಯಕ್ತಿಯ ಅಭಿಪ್ರಾಯವನ್ನಲ್ಲ ಎಂದು ರಾಹುಲ್ ಪ್ರತಿಪಾದಿಸಿದರು.
 ಉದ್ಯೋಗ ಸೃಷ್ಟಿಗೆ ಪ್ರಣಾಳಿಕೆ ಹೆಚ್ಚು ಒತ್ತು ನೀಡುತ್ತದೆ, ಕೃಷಿ ಬಿಕ್ಕಟ್ಟನ್ನು ನಿಭಾಯಿಸುತ್ತದೆ ಮತ್ತು ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಬಲಪಡಿಸುತ್ತದೆ ಮತ್ತು ಆರ್ಥಿಕ ಬೆಳವಣಿಗೆ ನೀಲ ನಕ್ಷೆಯನ್ನು ರೂಪಿಸುತ್ತದೆ ಎಂದು ಮಾಜಿ ಕೇಂದ್ರ ಸಚಿವ ಚಿದಂಬರಂ ತಿಳಿಸಿದರು.
 4ಕೋಟಿ 70 ಲಕ್ಷ ಉದ್ಯೋಗಗಳ ನಷ್ಟವಾಗಿದೆ. ರೈತರು ಕೆಟ್ಟ ಸ್ಥಿತಿಯಲ್ಲಿದ್ದು ವಿಪುಲ ಸಾಲವನ್ನು ಹೊತ್ತಿದ್ದಾರೆ. ಮಹಿಳೆಯರಲ್ಲಿ ಅಭದ್ರತೆ ಕಾಡಿದೆ. ನಿರುದ್ಯೋಗ, ರೈತರ ಸಂಕಷ್ಟ , ಮಹಿಳೆಯರ ಸುರಕ್ಷತೆ ಮೂರು ಮುಖ್ಯ ವಿಷಯಗಳಾಗಿದ್ದು, ನಮ್ಮ ಪ್ರಣಾಳಿಕೆಯು ಇವುಗಳಿಗೆ ಬೆಂಬಲಿಸುತ್ತದೆ ಎಂದು ಚಿದಂಬರಂ ಹೇಳಿದರು.

 ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ದೇಶ ಒಡೆಯುವ ಗುರಿ 
ವಿತ್ತ ಸಚಿವ ಅರುಣ್ ಜೇಟ್ಲಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆಯನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. ಇದು ದೇಶವನ್ನು ಒಡೆಯುವ ಗುರಿ ಹೊಂದಿರುವ ಕಾರ್ಯಸೂಚಿಗಳನ್ನು ಹೊಂದಿದೆ ಎಂದು ಕುಹಕವಾಡಿದರು. ಕೆಲವು ಕಲ್ಪನೆಗಳು ಸಕಾರಾತ್ಮಕವಾಗಿ ಅಪಾಯಕಾರಿಯಾಗಿದೆ ಎಂದು ಕಾಂಗ್ರೆಸ್ ಪ್ರಣಾಳಿಕೆ ಕುರಿತು ಪ್ರತಿಕ್ರಿಯಿಸುತ್ತಾ ಹೇಳಿದರು.

 ನೆಹರು-ಗಾಂಧಿ ಕುಟುಂಬ ಎಸಗಿದ ತಪ್ಪುಗಳು ಪ್ರಸಕ್ತ ಕಾಂಗ್ರೆಸ್ ಪಕ್ಷದಲ್ಲಿ ಮುಂದುವರಿಯುತ್ತಿದೆ. ಈ ಪ್ರಣಾಳಿಕೆ ಬಿಡುಗಡೆ ಮಾಡಿದ ಜನರ ವಿಶ್ವಾಸಾರ್ಹತೆಯನ್ನು ಅವರು ಪ್ರಶ್ನಿಸಿದರು. ಕರಡು ಸಮಿತಿ ಇದ್ದರೂ ಕೂಡ ಜಮ್ಮುಕಾಶ್ಮೀರಕ್ಕೆ ಸಂಬಂಧಿಸಿದ ಕೆಲವು ಮುಖ್ಯ ಅಂಶಗಳನ್ನು ತುಕ್ಡೆ ತುಕ್ಡೆ ಗ್ಯಾಂಗ್‌ನಲ್ಲಿರುವ  ಕಾಂಗ್ರೆಸ್ ಅಧ್ಯಕ್ಷರ ಸ್ನೇಹಿತ ರೂಪಿಸಿರುವಂತೆ ಕಾಣುತ್ತದೆ ಎಂದು ಜೇಟ್ಲಿ ಹೇಳಿದರು.
7 ಪಾಕಿಸ್ತಾನ ಚೌಕಿಗಳು ನಾಶ, 3 ಪಾಕ್ ಯೋಧರು ಬಲಿ 

Recent Comments

Leave Comments

footer
Top