• 19 April 2019 19:59
Jai Kannada
Jai Kannada
Blog single photo
April 02, 2019

ಹ್ಯಾಟ್ರಿಕ್ ಸೋಲು ಕಂಡ ಆರ್‌ಸಿಬಿ-ರಾಜಸ್ಥಾನ ರಾಯಲ್ಸ್ ನಡುವೆ ಜಿದ್ದಾಜಿದ್ದಿನ ಹೋರಾಟ

 ಆಡಿದ ಮೂರೂ ಪಂದ್ಯಗಳಲ್ಲಿ ಸೋತು ಕಂಗೆಟ್ಟಿರುವ ಆರ್‌ಸಿಬಿ ರಾಜಸ್ಥಾನ ರಾಯಲ್ಸ್ ವಿರುದ್ಧ ನಾಲ್ಕನೇ ಪಂದ್ಯವಾಡಲಿದ್ದು, ಗೆಲುವು ಸಾಧಿಸಲು ಶತಾಯಗತಾಯ ಪ್ರಯತ್ನಿಸಲಿದೆ. ಆರ್‌ಸಿಬಿಯ ರೀತಿಯಲ್ಲಿ ರಾಜಸ್ಥಾನ ರಾಯಲ್ಸ್ ಕೂಡ ಸತತವಾಗಿ ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್ ಸೋಲು ಕಂಡಿದ್ದು.  ಅದು ಕೂಡ ಈ ಪಂದ್ಯದಲ್ಲಿ ಗೆಲ್ಲುವ ಕನಸು ಕಾಣುತ್ತಿದೆ.

ರಾಜಸ್ಥಾನ ರಾಯಲ್ಸ್ ತಂಡವು ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದ್ದು ಬೌಲಿಂಗ್‌ನಲ್ಲೂ ಕಡಿಮೆಯಿಲ್ಲ. ರಾಜಸ್ಥಾನದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ.ಎರಡು ಹ್ಯಾಟ್ರಿಕ್ ಸೋಲು ಕಂಡ ತಂಡಗಳ ನಡುವೆ ಹಣಾಹಣಿ ಹೋರಾಟ ನಡೆಯುವುದರಲ್ಲಿ ಅನುಮಾನವಿಲ್ಲ.  ಸತತ ಮೂರು ಪಂದ್ಯಗಳಲ್ಲಿ ಸೋಲಿನಿಂದ ವಿರಾಟ್ ಕೊಹ್ಲಿ ಅವರ ನಾಯಕತ್ವ ಮೊನಚು ಕಳೆದುಕೊಂಡಿದೆಯೇನೋ ಎಂಬ ಅನುಮಾನವೂ ಮೂಡುತ್ತಿರುವ ನಡುವೆ  ಆರ್‌ಸಿಬಿಯ ಬ್ಯಾಟಿಂಗ್ ಕ್ರಮಾಂಕದಲ್ಲಿ ಅನಿಶ್ಚಿತತೆ ಮತ್ತು ಬೌಲಿಂಗ್ ದಾಳಿಯಲ್ಲಿ ನಾಯಕತ್ವದ ಕೊರತೆ ಸೋಲಿಗೆ ಕಾರಣವೆನ್ನಬಹುದು.

ಬೆಂಗಳೂರು ಮೂಲದ ಆರ್‌ಸಿಬಿ ಮೂರು ಭಿನ್ನ ಓಪನಿಂಗ್ ಆಟಗಾರರನ್ನು ಪಾರ್ಥಿವ್ ಪಟೇಲ್ ಜತೆಗಾರರಾಗಿ ಆಡಿಸಿತ್ತು. ಅದರಲ್ಲಿ ನಾಯಕ ಕೊಹ್ಲಿ ಕೂಡ ಸೇರಿದ್ದರು.ಆದರೆ ಯಾವುದೇ ಜೋಡಿ ಆರಂಭಿಕ ಆಟದಲ್ಲಿ ಯಶಸ್ಸು ಕಾಣಲಿಲ್ಲ. ಇದಲ್ಲದೇ ಆರ್‌ಸಿಬಿಯಲ್ಲಿ ಡೆತ್ ಬೌಲರ್ ಕೊರತೆ ಕಂಡುಬಂದಿದ್ದು, ಅದು ನಿಜಕ್ಕೂ ಎಲ್ಲಾ ಪಂದ್ಯಗಳಲ್ಲಿ ಪೆಟ್ಟು ನೀಡುತ್ತಿದೆ. 

Recent Comments

Leave Comments

footer
Top