• 19 November 2018 06:21
Jai Kannada
Jai Kannada
Blog single photo
January 01, 2018

ಪಾಕಿಸ್ತಾನಕ್ಕೆ ಮಿಲಿಟರಿ ನೆರವು ಇನ್ನಿಲ್ಲ: ಕಿಡಿಕಾರಿದ ಬುಷ್ 

ವಾಷಿಂಗ್ಟನ್ ಡಿಸಿ: ಭಯೋತ್ಪಾದಕರಿಗೆ ಸುರಕ್ಷಿತ ತಾಣವನ್ನು ಒದಗಿಸುತ್ತಿರುವ ಪಾಕಿಸ್ತಾನದ ವಿರುದ್ಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಕಿಡಿಕಾರಿದ್ದಾರೆ.

ತಮ್ಮ ಕಟುವಾದ ಭಾಷೆಯಲ್ಲಿ ಟ್ವೀಟ್ ಮಾಡಿದ ಟ್ರಂಪ್, ಅಮೆರಿಕ ಪಾಕಿಸ್ತಾನಕ್ಕೆ ಕಳೆದ 15 ವರ್ಷಗಳಿಂದ ಮೂರ್ಖತನದಿಂದ ಮಿಲಿಟರಿ ನೆಲವು ನೀಡುತ್ತಿದೆ. ಆದರೆ ಅದಕ್ಕೆ ಸಿಕ್ಕಿದ್ದು ಪಾಕಿಸ್ತಾನದ ಬರೀ ಸುಳ್ಳುಗಳು ಮತ್ತು ವಂಚನೆ ಎಂದಿದ್ದಾರೆ.

ಅಮೆರಿಕದ 33 ಶತಕೋಟಿ ಡಾಲರ್ ನೆರವನ್ನು 15 ವರ್ಷಗಳಿಂದೀಚೆಗೆ ಒದಗಿಸಿದ್ದರೂ, ನಮ್ಮ ನಾಯಕರು ಮೂರ್ಖರು ಎಂದು ಭಾವಿಸಿ ಸುಳ್ಳುಗಳು ಮತ್ತು ವಂಚನೆಯನ್ನು ಪಾಕಿಸ್ತಾನ ನೀಡಿದೆ.. ನಾವು ಆಫ್ಘಾನಿಸ್ತಾನದಲ್ಲಿ ಭೇಟೆಯಾಡುವ ಭಯೋತ್ಪಾದಕರಿಗೆ ಸುರಕ್ಷಿತ ತಾಣವನ್ನು ಅದು ಒದಗಿಸಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಟ್ರಂಪ್ ಸೋಮವಾರ ಟ್ವೀಟ್ ಮಾಡಿದ್ದಾರೆ.

ವಿಶ್ವಸಂಸ್ಥೆ ಭಯೋತ್ಪಾದಕನೆಂದು ಘೋಷಿಸಿದ ಹಫೀಜ್ ಸಯೀದ್ ಪಾಕಿಸ್ತಾನದಲ್ಲಿ 2018ರ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದು, ಮಿಲ್ಲಿ ಮುಸ್ಲಿಂ ಲೀಗ್ ಎಂಬ ಪಕ್ಷ ರಚಿಸಿಕೊಂಡಿರುವ ಹಿನ್ನೆಲೆಯಲ್ಲಿ ಬುಷ್ ಟ್ವೀಟ್ ಹೊರಬಿದ್ದಿದೆ. ಸಯೀದ್‌ಗೆ  ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನ ಕೋರ್ಟ್ ಸಾಕ್ಷ್ಯಾಧಾರದ ಕೊರತೆಯಿಂದ ಗೃಹಬಂಧನದಿಂದ ಬಿಡುಗಡೆ ಮಾಡಿತ್ತು.
 

Recent Comments

Leave Comments

footer
Top