• 19 January 2018 05:30
Jai Kannada
Jai Kannada
Blog single photo
January 01, 2018

ದಕ್ಷಿಣ ಆಫ್ರಿಕಾದಲ್ಲಿ ಕೊಹ್ಲಿ, ಧವನ್ ನೃತ್ಯ 

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಓಪನರ್ ಶಿಖರ್ ಧವನ್ ಅವರು ಹೊಸ ವರ್ಷದ ಸಂಭ್ರಮವನ್ನು ದಕ್ಷಿಣ ಆಫ್ರಿಕಾದಲ್ಲಿ ಆಚರಿಸಿಕೊಂಡರು.

ಜನವರಿ 5ರಿಂದ ಆರಂಭವಾಗುವ ಟೆಸ್ಟ್ ಪಂದ್ಯಕ್ಕೆ ಕೆಲವೇ ದಿನಗಳ ಮುನ್ನ, ಕೇಪ್ ಟೌನ್ ಬೀದಿಗಳಲ್ಲಿ ತಮ್ಮ ನೃತ್ಯ ಕೌಶಲ್ಯವನ್ನು ಅವರಿಬ್ಬರು ಪ್ರದರ್ಶಿಸುವ ಮೂಲಕ ನೆರೆದಿದ್ದ ಜನರನ್ನು ರಂಜಿಸಿದರು.

ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಇವರಿಬ್ಬರು ತಮ್ಮ ಕುಟುಂಬಗಳ ಜತೆ ನಗರದಲ್ಲಿ ವಿಹಾರ ಹೊರಟಿದ್ದಾಗ ಬ್ಯಾಂಡ್ ಲಯಕ್ಕೆ ತಕ್ಕಂತೆ ನೃತ್ಯ ಮಾಡುತ್ತಿರುವುದು ಕಂಡುಬಂತು. ವಿಡಿಯೊದಲ್ಲಿ ಧವನ್ ಪುತ್ರ ಕೂಡ ಇದ್ದಾನೆ. 

ವಿಡಿಯೊ ಕ್ಲಿಕ್ ಮಾಡಿ 

Recent Comments

Leave Comments

footer
Top