• 23 January 2020 22:31
Jai Kannada
Jai Kannada
Blog single photo
March 28, 2019

ಐದಕ್ಕಿಂತ ಹೆಚ್ಚು ಮಕ್ಕಳಿರುವ ಪೋಷಕರಿಗೆ ಹೃದಯಬೇನೆಯ ಅಪಾಯ ಹೆಚ್ಚು 

ವಾಷಿಂಗ್ಟನ್: ಹೆಚ್ಚು ಮಕ್ಕಳಿರುವ ಪೋಷಕರು ಒಂದೆರಡು ಮಕ್ಕಳನ್ನು ಹೊಂದಿರುವ ಪೋಷಕರಿಗಿಂತ ಹೃದಯ ಬೇನೆಯ ಹೆಚ್ಚಿನ ಅಪಾಯಗಳಿಗೆ ಗುರಿಯಾಗುತ್ತಾರೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ. 50 ಮತ್ತು ಅದಕ್ಕಿಂತ ಹೆಚ್ಚಿನ ರಾಷ್ಟ್ರೀಯ ಆರೋಗ್ಯ ಸಮೀಕ್ಷೆಯಲ್ಲಿ ಪಾಲ್ಗೊಂಡ ಸುಮಾರು 25,000 ಜನರ ದತ್ತಾಂಶವನ್ನು ಸಂಶೋಧಕರು ಅಧ್ಯಯನ ಮಾಡಿದ್ದು, ಅದರ ಫಲಿತಾಂಶವನ್ನು ಏಜಿಂಗ್ ಮತ್ತು ಹೆಲ್ತ್ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.

ಅನೇಕ ಅಧ್ಯಯನಗಳಲ್ಲಿ ಮಹಿಳೆಯ ಸಂತಾನೋತ್ಪತ್ತಿಯ ಲಕ್ಷಣಗಳಾದ ಎಷ್ಟನೇ ವಯಸ್ಸಿನಲ್ಲಿ  ಮೊದಲ ಮಗುವಿನ ಜನನ, ನಂತರದ ಜೀವನದಲ್ಲಿ ಹೃದಯ ಬೇನೆಯ ಅಪಾಯ ಮುಂತಾದುವಕ್ಕೆ ಕೊಂಡಿ ಕಲ್ಪಿಸಲಾಗಿದೆ. ಆದರೆ ಕುಟುಂಬದ ಗಾತ್ರ ಮತ್ತು ಹೃದಯ ಬೇನೆಗೆ ಸಂಬಂಧದ ಬಗ್ಗೆ ಹೆಚ್ಚಿನ ವಿಷಯ ಗೊತ್ತಿರಲಿಲ್ಲ.

ತಮಗೆ ಐದು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿದ್ದಾರೆಂದು ಹೇಳಿದ ಶೇ. 30ಕ್ಕಿಂತ ಹೆಚ್ಚಿನ ಪೋಷಕರಿಗೆ ಹೃದಯ ಬೇನೆ, ಹೃದಯದ ನೋವು, ಹೃದಯ ವೈಫಲ್ಯ ಮುಂತಾದುವಕ್ಕೆ ಗುರಿಯಾಗುತ್ತಾರೆಂದು ಸಂಶೋಧಕರು ಪತ್ತೆಮಾಡಿದ್ದಾರೆ. 

Recent Comments

Leave Comments

footer
Top