• 19 April 2019 20:28
Jai Kannada
Jai Kannada
Blog single photo
March 17, 2019

ಕೆಲವೇ ಸೆಕೆಂಡುಗಳ ಅಂತರದಲ್ಲಿ ತಪ್ಪಿದ ಎರಡು ವಿಮಾನಗಳ ಡಿಕ್ಕಿ 

 ನವದೆಹಲಿ: ಎರಡು ಅಂತರರಾಷ್ಟ್ರೀಯ ಫ್ಲೈಟ್‌‌ಗಳು ಅಪಾಯಕಾರಿಯಾಗಿ ಅತೀ ಸಮೀಪದಲ್ಲೇ ಹಾದುಹೋಗಿರುವ ಘಟನೆ ಮುಂಬೈ ಆಕಾಶದಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ಎರಡು ವಿಮಾನಗಳು ಕೆಲವೇ ಸೆಕೆಂಡುಗಳ ಅಂತರದಲ್ಲಿರುವಾಗಲೇ ಡಿಕ್ಕಿ ತಪ್ಪಿಸುವ ವ್ಯವಸ್ಥೆ ತೆರೆದುಕೊಂಡು ಎರಡೂ ವಿಮಾನಗಳನ್ನು ದೂರ ಸರಿಸಿದ್ದರಿಂದ ಆಗಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ.

ಕಳೆದ ಫೆ. 27ರಿಂದ ಪಾಕಿಸ್ತಾನ ವಾಯುಸೀಮೆ ಬಂದ್ ಮಾಡಿದ್ದರಿಂದ ಎರಡೂ ಫ್ಲೈಟ್‌ಗಳು ಈ ಮಾರ್ಗದಲ್ಲಿ ಸಂಚರಿಸಿತ್ತು. ಪಾಕಿಸ್ತಾನ ವಾಯುಸೀಮೆ ಬಂದ್ ಮಾಡಿದ್ದರಿಂದ ಮುಂಬೈ ವಾಯುಪ್ರದೇಶದಲ್ಲಿ ವಿಮಾನಗಳ ಹಾರಾಟ ಹೆಚ್ಚಿದ್ದು, ಅಲ್ಲಿನ ಎಟಿಸಿ ವಿಮಾನಸಂಚಾರ ದಟ್ಟಣೆಯನ್ನು ನಿರ್ವಹಿಸಲು ಅತಿಮಾನುಷ ಪ್ರಯತ್ನ ಮಾಡಬೇಕಾಗಿದೆ.

ಮಧ್ಯಾಹ್ನ 1.40ಕ್ಕೆ ಏರ್ ಫ್ರಾನ್ಸ್ ಬೋಯಿಂಗ್ 777 32000 ಅಡಿಯಲ್ಲಿ ಹೋ ಚಿನ್ ಮಿನ್ ಸಿಟಿಯಿಂದ ಪ್ಯಾರಿಸ್ ಕಡೆಗೆ ಹೊರಟಿತ್ತು. ಎಥಿಹಾಡ್ ಏರ್ ಬಸ್ 320 ಅಬುದಾಬಿಯಿಂದ ಕಠ್ಮಂಡು ಕಡೆಗೆ ಹೊರಟಿತ್ತು. ಮುಂಬೈ ಎಟಿಸಿ ಎಥಿಯಾಡ್ ಫ್ಲೈಟ್‌ಗೆ 32000 ಅಡಿ ಏರುವಂತೆ ಸೂಚಿಸಿತು. ಆಗ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಏರ್ ಫ್ರಾನ್ಸ್ ಬೋಯಿಂಗ್ ವಿಮಾನ ಹೆಚ್ಚುಕಡಿಮೆ ಮುಖಾಮುಖಿಯಾಗಿತ್ತು.

ಎರಡೂ ಮೂರು ನಾಟಿಕಲ್ ಮೈಲು ದೂರದಲ್ಲಿತ್ತು ಎಂದು ಮೂಲಗಳು ಹೇಳಿವೆ. ಸಂಚಾರ ಡಿಕ್ಕಿ ತಪ್ಪಿಸುವ ವ್ಯವಸ್ಥೆ( ಟಿಸಿಎಎಸ್) ವಿಮಾನಗಳಲ್ಲಿ ಕ್ರಿಯಾಶೀಲವಾದಾಗ ಪೈಲಟ್‌ಗಳು ಎರಡು ವಿಮಾನಗಳನ್ನು ದೂರ ಸರಿಸಿದರು. ಈ ಘಟನೆಯನ್ನು ದೃಢಪಡಿಸಿದ ಹಿರಿಯ ಎಟಿಸಿ ಅಧಿಕಾರಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. 
.............

Recent Comments

Leave Comments

footer
Top