• 19 March 2019 05:19
Jai Kannada
Jai Kannada
Blog single photo
March 14, 2019

ಭಾರತದ ವೇಗಿ ಮೊಹ್ಮದ್ ಶಮಿ ವಿರುದ್ಧ ಚಾರ್ಜ್ ಶೀಟ್ 

ಕೋಲ್ಕತಾ: ಕೋಲ್ಕತಾ ಪೊಲೀಸರ ಮಹಿಳಾ ಕುಂದುಕೊರತೆ ವಿಭಾಗವು ಭಾರತದ ವೇಗದ ಬೌಲರ್ ಮೊಹ್ಮದ್ ಶಮಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದೆ. ಅವರ ಪರಿತ್ಯಕ್ತ ಪತ್ನಿ ಹಸೀನಾ ಜಹಾನ್ ಆರೋಪಗಳ ಆಧಾರದ ಮೇಲೆ ಸೆಕ್ಷನ್ 498 ಎ(ಪತಿಯಿಂದ ಅಥವಾ ಪತಿಯ ಸಂಬಂಧಿಯಿಂದ ಮಹಿಳೆಯ ಮೇಲೇ ಕ್ರೌರ್ಯ) ಮತ್ತು 354ಎ(ಮಹಿಳೆಯ ಶೀಲಭಂಗ) ಎಫ್‌ಐಆರ್‌ನಲ್ಲಿ ನೋಂದಣಿಯಾಗಿದೆ.

ಅವರ ಕುಟುಂಬದ ಮೂವರಾದ ಅವರ ತಂದೆ, ತಾಯಿಗಳು ಮತ್ತು ಸೊಸೆಯ ಹೆಸರನ್ನು ಅಂತಿಮ ಆರೋಪಪಟ್ಟಿಯಲ್ಲಿ ತೆಗೆಯಲಾಗಿದೆ. ಶಮಿ ತಮ್ಮ ಮುಂಚಿನ ಫೇಸ್ ಬುಕ್ ಪುಟದ ಪೋಸ್ಟ್‌ನಲ್ಲಿ ತನ್ನ ವಿರುದ್ಧ ಆರೋಪಗಳು ಸುಳ್ಳಾಗಿದ್ದು, ತಮ್ಮ ಮಾನಹಾನಿಗೆ ಒಳಸಂಚು ನಡೆದಿದೆ ಎಂದು ಆರೋಪಿಸಿದ್ದರು. 

Recent Comments

Leave Comments

footer
Top