• 19 March 2019 05:17
Jai Kannada
Jai Kannada
Blog single photo
March 14, 2019

 ಮುಂಬೈನಲ್ಲಿ ಕಾಲುದಾರಿ ಸೇತುವೆ ಕುಸಿದು ನಾಲ್ವರ ದಾರುಣ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ 

ಮುಂಬೈ: ಮುಂಬೈನಲ್ಲಿ ಛತ್ರಪತಿ ಶಿವಾಜಿ ಮಹಾರಾಜ ನಿಲ್ದಾಣದ ಹೊರಗಿರುವ ಕಾಲುದಾರಿಯ ಸೇತುವೆ ಕುಸಿದು ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಮೃತಪಟ್ಟು 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಭೀಕರ ಘಟನೆ ಸಂಭವಿಸಿದೆ. ಇನ್ನೂ ಅನೇಕ ಮಂದಿ ಅವಶೇಷಗಳಡಿ ಸಿಕ್ಕಿಬಿದ್ದಿರಬಹುದು ಎಂದು ಶಂಕಿಸಲಾಗಿದೆ. 

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ ಅಪಘಾತದ ಸ್ಥಳಕ್ಕೆ ಧಾವಿಸಿವೆ.

 ಕಾಲುದಾರಿ ಸೇತುವೆಯು ದಕ್ಷಿಣ ಮುಂಬೈನ ಅಜಾದ್ ಮೈದಾನ ಪೊಲೀಸ್ ಠಾಣೆಗೆ ಮತ್ತು ಟೈಮ್ಸ್ ಆಫ್ ಇಂಡಿಯಾ ಕಟ್ಟಡಕ್ಕೆ ಸಂಪರ್ಕ ಕಲ್ಪಿಸಿದೆ. ಸೇತುವೆ ಕುಸಿತದಿಂದ ಸಂಚಾರಕ್ಕೆ ಅಡ್ಡಿಯಾಗಿದ್ದು, ಪ್ರಯಾಣಿಕರಿಗೆ ಪರ್ಯಾಯ ಮಾರ್ಗಗಳನ್ನು ಬಳಸಲು ಸಲಹೆ ಮಾಡಲಾಗಿದೆ.

Recent Comments

Leave Comments

footer
Top