• 19 March 2019 05:17
Jai Kannada
Jai Kannada
Blog single photo
March 14, 2019

ಮೈ ಮುಚ್ಚಿಕೊಳ್ಳಿ, ಇಲ್ಲದಿದ್ದರೆ ವಿಮಾನದಿಂದ ಕೆಳಕ್ಕಿಳಿಯಿರಿ; ಮಹಿಳೆಗೆ ಎಚ್ಚರಿಸಿದ ಏರ್‌ಲೈನ್ ಸಿಬ್ಬಂದಿ 

ಬರ್ಮಿಂಗ್ ಹ್ಯಾಮ್: ಪ್ರಯಾಣಿಕರೊಬ್ಬರಿಗೆ ಮೈಯನ್ನು ಸರಿಯಾಗಿ ಮುಚ್ಚಿಕೊಳ್ಳುವಂತೆಯೂ ಇಲ್ಲದಿದ್ದರೆ ಅವರು ಧರಿಸಿದ ಬಟ್ಟೆಯಲ್ಲೆ ವಿಮಾನದಿಂದ ಕೆಳಕ್ಕಿಳಿಸುವುದಾಗಿ ಆದೇಶ ನೀಡಿದ ಬಳಿಕ ಥಾಮಸ್ ಕುಕ್ ಏರ್‌ಲೈನ್ಸ್ ಮಹಿಳೆಯ ಕ್ಷಮೆ ಕೋರಿದೆ.

ಎಮೆಲಿ ಓ ಕಾನರ್ ಟ್ವಿಟರ್‌ನಲ್ಲಿ ಬರೆಯುತ್ತಾ, ಬರ್ಮಿಂಗ್‌ಹ್ಯಾಂನಿಂದ ಮಾರ್ಚ್ 2ರಂದು ಕ್ಯಾನರಿ ದ್ವೀಪಗಳಿಗೆ ಪ್ರಯಾಣಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ, ಥಾಮಸ್ ಕುಕ್ ವಿಮಾನದ ಸಿಬ್ಬಂದಿ ಮಹಿಳೆಯ ಹತ್ತಿರ ಹೋಗಿ ಅವರು ಧರಿಸಿದ್ದ ಸ್ಪ್ಯಾಗೆಟಿ ಸ್ಟ್ರಾಪ್ಸ್ ಮತ್ತು ಹೈವೇಸ್ಟ್ ಪ್ಯಾಂಟ್‌ಗಳು ಅವಳ ಮೈಯನ್ನು ತೋರಿಸುತ್ತಾದ್ದರಿಂದ ಅದು ಸೂಕ್ತವಲ್ಲ ಎಂದು ತಿಳಿಸಿದ್ದರು.

ಏರ್ ಪೋರ್ಟ್ ಭದ್ರತೆ ದಾಟಿ ಹೋಗಲು ಓ ಕಾನರ್‌ಗೆ ಯಾವುದೇ ಅಡ್ಡಿಯಾಗಿರಲಿಲ್ಲ. ಆದರೆ ಅವರು ಫ್ಲೈಟ್ ಏರುತ್ತಿದ್ದಂತೆ ಕನಿಷ್ಠ ನಾಲ್ವರು ಸಿಬ್ಬಂದಿ ಅವಳನ್ನು ಸುತ್ತುವರಿದು ಅವಳು ಉಡುಪು ಬದಲಾಯಿಸದಿದ್ದರೆ, ಬಲವಂತವಾಗಿ ವಿಮಾನದಿಂದ ಇಳಿಸುವುದಾಗಿ ಎಚ್ಚರಿಸಿದರು. ಇದೊಂದು ಅತ್ಯಂತ ಮುಜುಗರದ ಸೆಕ್ಸಿಸ್ಟ್ ಅನುಭವ ಎಂದು ಸಂದರ್ಶನವೊಂದರಲ್ಲಿ ಓಕಾನರ್ಸ್ ಹೇಳಿದ್ದಾರೆ.

ನನ್ನ ಎರಡು ಸಾಲುಗಳ ಹಿಂದಿದ್ದ ಪುರುಷನೊಬ್ಬ ಬರೀ ಚಡ್ಡಿ ಧರಿಸಿದ್ದ ಮತ್ತು ವೆಸ್ಟ್ ಟಾಪ್ ಧರಿಸಿದ್ದ. ಆದರೆ ಆ ಬಗ್ಗೆ ಅವರು ಏನೂ ಹೇಳಿಲ್ಲ ಎಂದು ಓ ಕಾನರ್ ದೂರಿದ್ದಾರೆ.

ಬಳಿಕ ಮಹಿಳೆ ಸಮೀಪದ ಪ್ರಯಾಣಿಕರಿಗೆ ನನ್ನ ಉಡುಪಿನಿಂದ ನಿಮಗೆ ಕಸಿವಿಸಿಯಾಗುತ್ತದೆಯಾ ಎಂದು ಪ್ರಶ್ನಿಸಿದಾಗ ಯಾರೊಬ್ಬರೂ ಉತ್ತರಿಸಿರಲಿಲ್ಲ. ಇದರಿಂದ ಮಹಿಳೆಗೆ ಇನ್ನಷ್ಟು ಅವಮಾನವಾಯಿತು. ವಿಮಾನದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಅವಳಿಗೆ ಬಯ್ಯುತ್ತಿದ್ದಾಗ ಕೂಡ ಸಿಬ್ಬಂದಿ ಏನು ಮಾತಾಡಿರಲಿಲ್ಲ ಎಂದು ಓಕಾನರ್ಸ್ ಹೇಳಿದ್ದಾರೆ.
ಅವರ ಕಸಿನ್ ಅಂತಿಮವಾಗಿ ಅವರಿಗೆ ಧರಿಸಲು ಜ್ಯಾಕೆಟ್ ನೀಡಿದರು. ಆದರೆ ಫ್ಲೈಟ್ ಸಿಬ್ಬಂದಿ ಮಾತ್ರ ಮಹಿಳೆ ಜಾಕೆಟ್ ಧರಿಸುವವರೆಗೆ ಅಲ್ಲೇ ನಿಂತಿದ್ದರು. 

Recent Comments

Leave Comments

footer
Top