• 19 March 2019 05:19
Jai Kannada
Jai Kannada
Blog single photo
March 14, 2019

ಉಡುಪಿ-ಚಿ.ಮಗಳೂರು: ಭೋಜೇಗೌಡರು ಜೆಡಿಎಸ್ ಸಂಭವನೀಯ ಅಭ್ಯರ್ಥಿ 

 ಉಡುಪಿ: ದೋಸ್ತಿ ಪಕ್ಷಗಳ ಡೀಲ್‌ನಲ್ಲಿ  ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ ಜೆಡಿಎಸ್ ಪಾಲಾಗಿದೆ. ಆದರೆ ಕಾಂಗ್ರೆಸ್ ಬೆಂಬಲಿಗರು ಮಾತ್ರ ನಿರಾಶರಾಗಿದ್ದಾರೆ. ಏಕೆಂದರೆ ಜೆಡಿಎಸ್‌ಗೆ ಹೋಲಿಸಿದರೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲವಾಗಿತ್ತು. ಜಿಲ್ಲೆಯಲ್ಲಿ ಒಬ್ಬರೂ ಪ್ರತಿನಿಧಿ ಹೊಂದಿರದ ಜೆಡಿಎಸ್‌ಗೆ ಈ ಕ್ಷೇತ್ರ ನೀಡಿದ್ದರಲ್ಲಿ ಏನರ್ಥವಿದೆ ಎಂದು ಉಡುಪಿ ಸಭೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಮುಖಂಡರು ಕೇಳಿದ್ದಾರೆ.

ಗ್ರೆಸ್ ಜೆಡಿಎಸ್‌ಗೆ ಸೀಟು ಬಿಟ್ಟುಕೊಡುವುದಾದರೆ ಜಯಪ್ರಕಾಶ್ ಹೆಗ್ಡೆ ಒಮ್ಮತದ ಅಭ್ಯರ್ಥಿ ಎಂಬ ವದಂತಿಗಳನ್ನು ಹೆಗ್ಡೆ ಅಲ್ಲಗಳೆದಿದ್ದರು. 
2014ರಲ್ಲಿ ಜೆಡಿಎಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ವಿ. ಧನಂಜಯ ಕುಮಾರ್ ಇತ್ತೀಚೆಗೆ ನಿಧನರಾದರು.

2012ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಭೋಜೇಗೌಡ ಈಗ ಎಂಎಲ್‌ಸಿ. ಈಗ ಬೋಜೇಗೌಡರೇ ಜೆಡಿಎಸ್ ಸಂಭವನೀಯ ಅಭ್ಯರ್ಥಿ ಎಂಬ ಬಲವಾದ ವದಂತಿ ಹಬ್ಬಿದೆ.  ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ನಿಲ್ಲಿಸದಿರುವುದು ಇದೇ ಮೊದಲ ಬಾರಿ ಎನ್ನಲಾಗಿದೆ. 

Recent Comments

Leave Comments

footer
Top