• 19 March 2019 05:19
Jai Kannada
Jai Kannada
Blog single photo
March 14, 2019

ಗುಜರಾತಿನಲ್ಲಿ ಪಬ್ಜಿ ಗೇಮ್ ನಿಷೇಧ: 10 ಮಂದಿ ವಿದ್ಯಾರ್ಥಿಗಳ ಬಂಧನ

ಅಹ್ಮದಾಬಾದ್: ಅತ್ಯಂತ ಜನಪ್ರಿಯವಾದ ಸ್ಮಾರ್ಟ್‌ಫೋನ್ ಆಟ ಪಬ್‌ಜಿ(PUBG) ಆಡುತ್ತಿದ್ದ 10 ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪಬ್ಜಿ ಆಟ ಪ್ರತಿಯೊಂದು ಮನೆಯ ರಾಕ್ಷಸ ಎಂದು ಸಚಿವರೊಬ್ಬರು ವರ್ಣಿಸಿದ್ದರು.

ಪಶ್ಚಿಮ ಗುಜರಾತಿನಲ್ಲಿ ಪಬ್ಜಿ ಆಡುವವರನ್ನು ಬಂಧಿಸಲಾಗಿದ್ದು, ಕಳೆದ ವಾರ ಅಧಿಕಾರಿಗಳು ಪಬ್ಜಿ ಆಟದ ವಿರುದ್ಧ ಸಂಪೂರ್ಣ ನಿಷೇಧ ವಿಧಿಸಿತ್ತು. ಪಬ್ಜಿ ಆಡುವುದರಿಂದ ಅದು ವರ್ತನೆ, ನಡವಳಿಕೆ ಮತ್ತು ಭಾಷೆ ಮೇಲೆ ದುಷ್ಪರಿಣಾಮ ಬೀರುತ್ತದೆಂಬ ಕಳವಳದಿಂದ ಗುಜರಾತಿನಲ್ಲಿ ಅದನ್ನು ಆಡುವುದಕ್ಕೆ ನಿಷೇಧಿಸಲಾಗಿದೆ. ಅದೇದಿನ ವಿದ್ಯಾರ್ಥಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. 

ಈ ಆಟವು ಅತ್ಯಂತ ಚಟದ್ದಾಗಿದ್ದು, ಆರೋಪಿಗಳು ಆಟದಲ್ಲಿ ಸಂಪೂರ್ಣ ಮುಳುಗಿದ್ದರಿಂದ ಪೊಲೀಸರು ಬಂದಿದ್ದೂ ಅವರಿಗೆ ಗೊತ್ತಾಗಿರಲಿಲ್ಲ. ಪಬ್ಜಿ ಆಟವನ್ನು ನಿಷೇಧಿಸಿರುವ ಏಕಮಾತ್ರ ರಾಜ್ಯ ಗುಜರಾತ್. ಈ ಆಟವನ್ನು 100 ದಶಲಕ್ಷ ಬಾರಿ ಜಗತ್ತಿನಾದ್ಯಂತ ಡೌನ್ ಲೋಡ್ ಮಾಡಲಾಗಿದೆ.

ಪೋಷಕರು ಮತ್ತು ಶಿಕ್ಷಕರು ಈ ಪಬ್ಜಿ ಆಟವು ಹಿಂಸೆಯನ್ನು ಪ್ರಚೋದಿಸುತ್ತದೆ ಮತ್ತು ವಿದ್ಯಾರ್ಥಿಗಳನ್ನು ಅಧ್ಯಯನದ ಮೇಲಿನ ಆಸಕ್ತಿಯನ್ನು ಕುಂಠಿತಗೊಳಿಸುತ್ತದೆ ಎಂದು ಹೇಳುತ್ತಾರೆ.

ಗೋವಾದ ಸಚಿವರೊಬ್ಬರು ಪಬ್ಜಿ ಆಟವನ್ನು ಪ್ರತಿಯೊಂದು ಮನೆಯಲ್ಲಿರುವ ರಾಕ್ಷಸ ಎಂದು ವರ್ಣಿಸಿದ್ದಾರೆ. ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಾಯಿಯೊಬ್ಬರು ದೂರು ನೀಡಿ ತಮ್ಮ ಪುತ್ರ ಆನ್ ಲೈನ್ ಆಟದ ಚಟ ಬೆಳೆಸಿಕೊಂಡಿದ್ದಾನೆಂದು ದೂರಿದಾಗ ಅದು ಪಬ್ಜಿ ಆಟವೇ ಎಂದು ಮೋದಿ ಕೇಳಿದ್ದರು. 
.

Recent Comments

Leave Comments

footer
Top