• 19 March 2019 05:30
Jai Kannada
Jai Kannada
Blog single photo
March 14, 2019

 ತಮಿಳುನಾಡನ್ನು ಬೆಚ್ಚಿಬೀಳಿಸಿದ 60 ಮಹಿಳೆಯರಿಗೆ ಲೈಂಗಿಕ ಕಿರುಕುಳ ಪ್ರಕರಣ 

ಮಂಗಳೂರು: ಪೊಲ್ಲಾಚಿ ಲೈಂಗಿಕ ದುರ್ಬಳಕೆ ಮತ್ತು ಅಪಹರಣ ಘಟನೆ ಇಡೀ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದ್ದು, ತಮಿಳುನಾಡಿನಲ್ಲಿ ರಾಜಕೀಯ ಕೋಲಾಹಲಕ್ಕೆ ಎಡೆಮಾಡಿದೆ. ಸಂತ್ರಸ್ತೆಯ ಪೈಕಿ ಒಬ್ಬಳಾದ 19 ವರ್ಷ ವಯಸ್ಸಿನ ಕಾಲೇಜಿನ ಯುವತಿ ನೀಡಿದ ದೂರಿನ ಆಧಾರದ ಮೇಲೆ ಈ ಘಟನೆಯಲ್ಲಿ ಭಾಗಿಯಾದ ಎಲ್ಲಾ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ದೂರಿನ ಆಧಾರದ ಮೇಲೆ ಪೊಲೀಸರು ನಾಲ್ವರ ತನಿಖೆ ನಡೆಸಿದಾಗ 2 ವರ್ಷಗಳ ಅವಧಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಗೆಳೆತನ ಬೆಳೆಸಿಕೊಂಡು ಅನೇಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ಮತ್ತು ಬೆದರಿಕೆಯನ್ನು ಆ ನಾಲ್ಕು ಮಂದಿಯ ಗ್ಯಾಂಗ್ ನೀಡಿರುವುದು ಬೆಳಕಿಗೆ ಬಂದಿದೆ. ತಿರುವನಕ್ಕರಸು, ಸತೀಶ, ಶಬರಿರಾಜ್ ಮತ್ತು ವಸಂತಕುಮಾರ್ ಅವರ ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಅವರ ಮೊಬೈಲ್ ಫೋನ್‌ಗಳಲ್ಲಿ ಗ್ಯಾಂಗ್ ಲೈಂಗಿಕವಾಗಿ ದೌರ್ಜನ್ಯ ನಡೆಸಿದ 50 ವಿಡಿಯೊ ಕ್ಲಿಪ್‌ಗಳು ಇರುವುದು ಬೆಳಕಿಗೆ ಬಂದಿದೆ.
ಈ ಘಟನೆಯಿಂದ ತಮಿಳುನಾಡಿದ ಜನರಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ. 
ಈ ಘಟನೆ ಬೆಳಕಿಗೆ ಬಂದಿದ್ದು ?
ಲೈಂಗಿಕ ಕಿರುಕುಳ ಮತ್ತು ಬ್ಲಾಕ್ ಮೇಲ್ ಘಟನೆಯು ಪೊಲ್ಲಾಚಿಯಲ್ಲಿ ಬೆಳಕಿಗೆ ಬಂದಿದೆ. ಹದಿಹರೆಯದ ಕಾಲೇಜು ಬಾಲಕಿಯಾಗಿದ್ದ ಸಂತ್ರಸ್ತೆ ನಾಲ್ವರು ಯುವಕರ ಗ್ಯಾಂಗ್ ನನ್ನ ಮೇಲೆ ಲಾಂಗಿಕ ಕಿರುಕುಳ ಮತ್ತು ಬ್ಲಾಕ್ ಮೇಲ್ ಮಾಡಿದೆಯೆಂದು ಪೊಲ್ಲಾಚಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಲ್ಲಿಸಿದ್ದಳು. 

ಆರೋಪಿ ಶಬರಿರಾಜನ್ ನನ್ನ ಜತೆ ಫೇಸ್ ಬುಕ್ ಸ್ನೇಹ ಸಂಪಾದಿಸಿ  ತುರ್ತುವಿಷಯವನ್ನು ಚರ್ಚಿಸುವ ನೆಪದಲ್ಲಿ ಪೊಲ್ಲಾಚಿಯ ಬಸ್ ನಿಲ್ದಾಣಕ್ಕೆ ಬರುವಂತೆ ಸೂಚಿಸಿದ್ದ. ಅದರಂತೆ  ಬಾಲಕಿ ಅಲ್ಲಿಗೆ ಹೋಗಿದ್ದಾಗ ಅವನ ಸ್ನೇಹಿತ ತಿರುವನಕ್ಕರಸು ಕೂಡ ಜತೆ ಸೇರಿದ್ದ. ಏನಾಗುತ್ತಿದೆ ಎಂದು ಯೋಚಿಸುವಷ್ಟರಲ್ಲಿ ಸತೀಶ್ ಮತ್ತು ವಸಂತ ಕುಮಾರ್ ಕೂಡ ಕಾರಿನಲ್ಲಿ ಜತೆಗೂಡಿದ್ದರು. ಬಾಲಕಿಯ ಬಟ್ಟೆಯನ್ನು ಬಲವಂತವಾಗಿ ಬಿಚ್ಚಿ ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದರು ಮತ್ತು ಚಿನ್ನದ ಸರ ಕಸಿದುಕೊಂಡಿದ್ದರಲ್ಲದೇ ಲೈಂಗಿಕ ಕಿರುಕುಳ ದೃಶ್ಯದ ವಿಡಿಯೊ ಚಿತ್ರೀಕರಣ ಮಾಡಿದ್ದರು. ಹಣ ಮತ್ತು ಲೈಂಗಿಕ ಸಹಕಾರ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಬಾಲಕಿ ಜೋರಾಗಿ ಕಿರುಚಿಕೊಂಡು ಕೂಗಿದಾಗ ಅವಳನ್ನು ರಸ್ತೆಯ ಮಧ್ಯದಲ್ಲೇ ಬಿಸಾಕಿ ತೆರಳಿದ್ದರು.ಬಾಲಕಿ ಘಟನೆಯನ್ನು ಯಾರಿಗೂ ಹೇಳಿರಲಿಲ್ಲ. ಆದರೆ ಗ್ಯಾಂಗ್ ಪುನಃ ಬ್ಲಾಕ್ ಮೇಲ್ ಮಾಡಿ ಹಣಕೀಳಲು ಯತ್ನಿಸಿದಾಗ ತನ್ನ ಕುಟುಂಬವನ್ನು ಬಾಲಕಿ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲ ವಿಷಯ ಬಾಯಿಬಿಟ್ಟಳು. ಅವಳ ಸೋದರ ಮತ್ತು ಸ್ನೇಹಿತ ಇಬ್ಬರು ದುಷ್ಕರ್ಮಿಗಳಾದ ತಿರುವನಕ್ಕರಸು ಮತ್ತು ಶಬರಿರಾಜನ್ ಅವರನ್ನು ಪತ್ತೆ ಹಚ್ಚಿ ಅವರ ಬಳಿಯಿದ್ದ ಮೊಬೈಲ್‌ಗಳನ್ನು ಕಸಿದುಕೊಂಡು ನೋಡಿದಾಗ ಅನೇಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ದೃಶ್ಯಗಳು ವಿಡಿಯೊದಲ್ಲಿದ್ದವು. ಈ ಪುರಾವೆಯ ಆಧಾರದ ಮೇಲೆ ಕುಟುಂಬವು ಪೊಲ್ಲಾಚಿ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ದೂರನ್ನು ದಾಖಲಿಸಿತು.

 

Recent Comments

Leave Comments

footer
Top