• 19 March 2019 05:20
Jai Kannada
Jai Kannada
Blog single photo
March 14, 2019

ಸೋದರರ ಹತ್ಯೆ ಪ್ರತ್ಯಕ್ಷದರ್ಶಿಗೆ ಗುಂಡಿಕ್ಕಿ ಕೊಲೆ 

ಮುಜಫರ್‌ನಗರ: ಮುಜಫರ್ ನಗರ ಗಲಭೆ ಸಂದರ್ಭದಲ್ಲಿ ತನ್ನ ಇಬ್ಬರು ಸೋದರರ ಹತ್ಯೆಯನ್ನು ಕಣ್ಣಾರೆ ಕಂಡಿದ್ದ ವ್ಯಕ್ತಿಯೊಬ್ಬನನ್ನು ಖಾಟೋಲಿಯಲ್ಲಿ ಗುಂಡಿಕ್ಕಿ ಬರ್ಬರವಾಗಿ ಹತ್ಯೆಮಾಡಲಾಗಿದೆ.

 2013ರ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಸಂಭವಿಸಿದ ಕೋಮು ಗಲಭೆಗಳಲ್ಲಿ 60 ಕ್ಕೂ ಹೆಚ್ಚು ಜನರ ಜೀವಗಳನ್ನು ಬಲಿತೆಗೆದುಕೊಂಡಿದ್ದು, 40,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದರು. ಪ್ರತ್ಯಕ್ಷದರ್ಶಿಯನ್ನು ಹತ್ಯೆ ಮಾಡಿದ ಶೂಟರ್‌ ಗುರುತು ಪತ್ತೆ ಮಾಡಲು ಪೊಲೀಸರು ಸಿಸಿಟಿವಿ ಫೂಟೇಜ್ ಪರಿಶೀಲನೆ ಮಾಡುತ್ತಿದ್ದು, ಅಶ್ಫಫ್ ಹಾಲನ್ನು ಪೂರೈಕೆ ಮಾಡುವ ಸಂದರ್ಭದಲ್ಲಿ ಹತ್ಯೆಗೊಳಗಾಗಿದ್ದ ಎಂದಿದ್ದಾರೆ.

ಗಲಭೆಗಳ ಸಂದರ್ಭದಲ್ಲಿ ಮತ್ತು ಮುಂಚೆ ತನ್ನ ಇಬ್ಬರು ಸೋದರರಾದ ನವಾಬ್ ಮತ್ತು ಶಾಹಿದ್ ಹತ್ಯೆಗಳಿಗೆ ಅವನು ಪ್ರತ್ಯಕ್ಷಸಾಕ್ಷಿಯಾಗಿದ್ದ. ಅವನ ಕೇಸ್ ವಾಪಸ್ ತೆಗೆದುಕೊಳ್ಳದಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆಂದು ಅವನಿಗೆ ದುಷ್ಕರ್ಮಿಗಳು ಎಚ್ಚರಿಸಿದ್ದರೆಂದು ಪೊಲೀಸರು ತಿಳಿಸಿದ್ದಾರೆ.ಈ ಬೆದರಿಕೆಗಳ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆಯನ್ನು ಕೂಡ ಅವನು ಪಡೆದುಕೊಂಡಿದ್ದ. 
ಅಶ್ಫಕ್ ಸೋದರರನ್ನು ಹತ್ಯೆ ಮಾಡಿದ ಆರೋಪದ ಮೇಲೆ 8 ಜನರು ವಿಚಾರಣೆ ಎದುರಿಸುತ್ತಿದ್ದು, ಮುಂದಿನ ವಿಚಾರಣೆಯನ್ನು ಮಾರ್ಚ್ 25ಕ್ಕೆ ನಿಗದಿ ಮಾಡಲಾಗಿದೆ. 

Recent Comments

Leave Comments

footer
Top