• 19 March 2019 05:18
Jai Kannada
Jai Kannada
Blog single photo
March 14, 2019

 ಚೀನಾ ಹೀಗೇ ಭಯೋತ್ಪಾದಕರಿಗೆ ಬೆಂಬಲ ಮುಂದುವರಿಸಿದರೆ ಬೇರೆ ಕ್ರಮ : ಅಮೆರಿಕ ಎಚ್ಚರಿಕೆ 

 ನ್ಯೂಯಾರ್ಕ್: ಜೈಷೆ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ವಿರುದ್ಧ ನಿಷೇಧ ಹೇರುವುದಕ್ಕೆ ಮತ್ತೆ ಅಡ್ಡಗಾಲು ಹಾಕಿರುವ ಚೀನಾ ವಿರುದ್ಧ ಈ ವಿಶ್ವಸಂಸ್ಥೆ ರಾಷ್ಟ್ರಗಳೇ ಗರಂ ಆಗಿವೆ. ಚೀನಾ ನಡೆಗೆ ಅಮೆರಿಕ ವ್ಯಗ್ರವಾಗಿದ್ದು, ಚೀನಾ ಇದೇ ಹಾದಿಯಲ್ಲಿ ಮುಂದುವರಿದರೆ ನಾವು ಬೇರೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದೆ.

ಮಸೂದ್ ಅಜರ್‌ನನ್ನು ಜಾಗತಿಕ ಮಟ್ಟದಲ್ಲಿ ಭಯೋತ್ಪಾದಕನೆಂದು ಘೋಷಿಸಲು ಫ್ರಾನ್ಸ್, ಬ್ರಿಟನ್ ಸೇರಿ ಎಲ್ಲಾ ರಾಷ್ಟ್ರಗಳು ಸಮ್ಮತಿ ಸೂಚಿಸಿದ್ದರೂ ಚೀನಾ ತನ್ನ ವ್ಯವಹಾರ ಲಾಭದ ದೃಷ್ಟಿಯಿಂದ ಮಸೂದ್ ಅಜರ್‌ಗೆ ಬೆಂಬಲಿಸುವುದು ಎಲ್ಲಾ ರಾಷ್ಟ್ರಗಳಿಗೂ ಸಿಟ್ಟು ತರಿಸಿದೆ.

ಚೀನಾ ಈ ಹಿಂದೆಯೂ ಮೂರು ಬಾರಿ ವಿಟೊ ಹಕ್ಕು ಚಲಾಯಿಸಿ ಮಸೂದ್ ಜಾಗತಿಕವಾಗಿ ಭಯೋತ್ಪಾದಕನೆಂಬ ಘೋಷಣೆ ಪ್ರಸ್ತಾಪವನ್ನು ತಿರಸ್ಕರಿಸುವ ಮೂಲಕ  ಅಡ್ಡಗಾಲು ಹಾಕಿತ್ತು.

ಈ ನಡುವೆ ಪಾಕಿಸ್ತಾನದ ಭಯೋತ್ಪಾದಕ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಣೆ ಮಾಡುವುದಕ್ಕೆ ಅಡ್ಡಗಾಲು ಹಾಕಿದ ಚೀನಾದ ವಸ್ತುಗಳ ಆಮದನ್ನು ಭಾರತ ನಿಷೇಧಿಸಬೇಕೆಂದು ಟ್ವಿಟರ್‌ನಲ್ಲಿ ಭಾರತೀಯರು ಒತ್ತಾಯಿಸಿದ್ದಾರೆ. 

Recent Comments

Leave Comments

footer
Top