• 19 March 2019 05:56
Jai Kannada
Jai Kannada
Blog single photo
March 14, 2019

ಕೊನೆಗೂ ಚೀನಾ ನರಿಬುದ್ಧಿ: ಮಸೂದ್ ನಿಷೇಧಕ್ಕೆ ಅಡ್ಡಗಾಲು 

 ನವದೆಹಲಿ/ವಾಷಿಂಗ್ಟನ್ : ಕೊನೆಗೂ ಚೀನಾ ಎಲ್ಲರ ಎಣಿಕೆಯಂತೆ ತನ್ನ ನರಿಬುದ್ಧಿಯನ್ನು ತೋರಿಸಿಯೇಬಿಟ್ಟಿದೆ. ಜೈಷೆ ಮೊಹ್ಮದ್ ಮುಖಂಡ ಮಸೂದ್ ಅಜರ್ ನಿಷೇಧಕ್ಕೆ ವಿಶ್ವಸಂಸ್ಥೆಯಲ್ಲಿ ಮಾಡಿದ್ದ ಪ್ರಸ್ತಾವನೆಗೆ ಚೀನಾ ತನ್ನ ವೀಟೊ ಅಧಿಕಾರ ಚಲಾಯಿಸಿ ತಡೆ ನೀಡಿದೆ. ಪುಲ್ವಾಮಾ ದಾಳಿಯ ಬಳಿಕ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ನಿರ್ಧಾರಕ್ಕೆ ಚೀನಾ ಅಡ್ಡಗಾಲು ಹಾಕಿದ್ದರಿಂದ ತಡೆಯಾಗಿದೆ. ಚೀನಾ ಕಳೆದ ಮೂರು ಬಾರಿ ಕೂಡ ಇದೇ ರೀತಿಯ ಪ್ರಸ್ತಾವನೆಗೆ ಅಡ್ಡಗಾಲು ಹಾಕಿತ್ತು. 

 ಈ ಫಲಿತಾಂಶದಿಂದ ತನಗೆ ತೀರಾ ನಿರಾಶೆಯಾಗಿದೆ ಎಂದು ಭಾರತ ತಿಳಿಸಿದೆ. ಇದರಿಂದ ಅಂತಾರಾಷ್ಟ್ರೀಯ ಸಮುದಾಯ ಸಕ್ರಿಯವಾದ ಭಯೋತ್ಪಾದನೆ ಸಂಘಟನೆಯ ಮುಖಂಡ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ತಡೆಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.  ಚೀನಾ ಮಸೂದ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ನಿರ್ಧರಿಸಿದರೆ,  ಪಾಕಿಸ್ತಾನದಲ್ಲಿನ ಆರ್ಥಿಕ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತದೆನ್ನುವುದು ತಡೆನೀಡಲು ಮುಖ್ಯ ಕಾರಣವಾಗಿದೆ.

ಇದಕ್ಕೆ ಮೊದಲು ಚೀನಾ 2011, 2016 ಮತ್ತು 2017ರಲ್ಲಿ ಇದೇ ಪ್ರಸ್ತಾವನೆಗಳನ್ನು ಬ್ಲಾಕ್ ಮಾಡಿತ್ತು. ಇತ್ತೀಚಿನ ತಡೆಯು ಭಯೋತ್ಪಾದನೆ ಬಗ್ಗೆ ಚೀನಾದ ದ್ವಂದ್ವ ನೀತಿಯ ಲಕ್ಷಣವಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. 

Recent Comments

Leave Comments

footer
Top