• 19 March 2019 05:20
Jai Kannada
Jai Kannada
Blog single photo
March 13, 2019

ಸ್ಪೈಸ್ ಜೆಟ್ ಏರ್‌ಲೈನ್ಸ್‌ನ ಎಲ್ಲಾ ಬೋಯಿಂಗ್ 737 ಮ್ಯಾಕ್ಸ್ ವಿಮಾನ ಹಾರಾಟ ಇಂದು  ಸ್ಥಗಿತ 

ನವದೆಹಲಿ: ಸ್ಪೈಸ್ ಜೆಟ್ ಏರ್‌ಲೈನ್ಸ್‌ನ ಎಲ್ಲಾ ಬೋಯಿಂಗ್ 737  ವಿಮಾನಗಳ ಹಾರಾಟವನ್ನು ಸಂಜೆ 4 ಗಂಟೆಯೊಳಗೆ ಸ್ಥಗಿತಗೊಳಿಸಲಾಗುತ್ತದೆ.  ಮಂಗಳವಾರ ರಾತ್ರಿ ಭಾರತ ಸರ್ಕಾರ ಬೋಯಿಂಗ್ ವಿಮಾನಗಳ ಹಾರಾಟ ಸ್ಥಗಿತಗೊಳಿಸುವಂತೆ ಸೂಚಿಸಿದೆ. ಬುಧವಾರ ಸಂಜೆ 4ರಿಂದ ತನ್ನ ವಾಯುಪ್ರದೇಶದಲ್ಲಿ ಬೋಯಿಂಗ್ 737 ಮ್ಯಾಕ್ಸ್ ವಿಮಾನ ಹಾರಾಟವನ್ನು ರಾಷ್ಟ್ರ ನಿಷೇಧಿಸಿದೆ. 

ಇಥಿಯೋಪಿನ್ ಏರ್‌ಲೈನ್ಸ್ ಬೋಯಿಂಗ್ ವಿಮಾನದ ದುರಂತದ ಬಳಿಕ ಅನೇಕ ಏರ್‌ಲೈನ್‌ಗಳು ಬೋಯಿಂಗ್ 737 ಮ್ಯಾಕ್ಸ್ 8 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿವೆ. ಕೆಲವು ಏರ್‌ಲೈನ್‌ಗಳು ಗ್ರಾಹಕರ ದುಗುಡದ ಕಾರಣದಿಂದ ಬೋಯಿಂಗ್ ವಿಮಾನ ಹಾರಾಟ ಸ್ಥಗಿತಗೊಳಿಸಿದ್ದಾಗಿ ತಿಳಿಸಿವೆ. ಈ ನಡುವೆ ವೈಮಾನಿಕ ತಜ್ಞರು ಭಾನುವಾರ ವಿಮಾನ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಅಪಘಾತಕ್ಕೀಡಾಗಿದ್ದು ಹೇಗೆಂದು ವಿವರಗಳನ್ನು ಕಲೆಹಾಕಿದ್ದಾರೆ.

ಓಮನ್ ಮತ್ತು ದಕ್ಷಿಣ ಕೊರಿಯಾ ಏರ್‌ಲೈನ್ ಈಸ್ಟರ್ ಜೆಟ್ ಬೋಯಿಂಗ್ 373 ಮ್ಯಾಕ್ಸ್ 8 ವಿಮಾನಗಳ ಹಾರಾಟವನ್ನು  ಸ್ಥಗಿತಗೊಳಿಸಿದೆ. ಆಸ್ಟ್ರೇಲಿಯಾ ಮತ್ತು ಸಿಂಗಪುರ ದೇಶದಿಂದ ಹೊರಕ್ಕೆ ಮತ್ತು ಒಳಕ್ಕೆ ಎಲ್ಲಾ ಫ್ಲೈಟ್‌ಗಳನ್ನು ನಿಲ್ಲಿಸಿದೆ.

Recent Comments

Leave Comments

footer
Top