• 19 March 2019 05:18
Jai Kannada
Jai Kannada
Blog single photo
March 13, 2019

ಸಂಕಷ್ಟದ ಸ್ಥಿತಿಯಲ್ಲಿ ಬಿಎಸ್ಸೆನ್ನೆಲ್ : ಫೆಬ್ರವರಿ ವೇತನ ನೀಡಿಲ್ಲ

ನವದೆಹಲಿ: ಬಿಎಸ್ಸೆನ್ನೆಲ್ ನೌಕರರಿಗೆ ಕಷ್ಟದ ದಿನಗಳು ಆರಂಭವಾಗಿದ್ದು, ಟೆಲಿಕಾಂ ಸಂಸ್ಥೆ 1.68 ಲಕ್ಷ ನೌಕರರಿಗೆ ಫೆಬ್ರವರಿ ವೇತನವನ್ನು ಇನ್ನೂ ನೀಡಿಲ್ಲ. 18 ವರ್ಷಗಳಲ್ಲಿ ಬಿಎಸ್ಸೆನ್ನೆಲ್ ಇದೇ ಮೊದಲ ಬಾರಿಗೆ ಸಿಬ್ಬಂದಿಗೆ ವೇತನ ನೀಡುವುದರಲ್ಲಿ ವಿಫಲವಾಗಿದೆ. ನೌಕರರಿಗೆ ಫೆ. 28ರಂದು ವೇತನ ನೀಡಬೇಕಾಗಿತ್ತು.

ಗುತ್ತಿಗೆ ನೌಕರರ ಪರಿಸ್ಥಿತಿ ಇನ್ನೂ ಕೆಟ್ಟದಾಗಿದ್ದು, ಕಳೆದ 3 ತಿಂಗಳಿಂದ ಸಂಬಳ ಸಿಕ್ಕಿಲ್ಲ. ಸರ್ಕಾರ ಯಾವುದೇ ಹಣಕಾಸು ಬೆಂಬಲ ನೀಡದಿರುವುದರಿಂದ ವೇತನ ವಿಳಂಬವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಂಪನಿಗೆ ಆದಾಯ ಬರುತ್ತಿದ್ದಂತೆಯೇ ಸಿಬ್ಬಂದಿಗೆ ವೇತನ ನೀಡುವುದಾಗಿ ಅವರು ತಿಳಿಸಿದ್ದಾರೆ.

ತೀವ್ರ ನಷ್ಟದಲ್ಲಿರುವ ಬಿಎಸ್ಸೆನ್ನೆಲ್ ಕಂಪನಿಯು ನಿವೃತ್ತಿ ವಯಸ್ಸನ್ನು 58ಕ್ಕೆ ಇಳಿಸುವ ಮೂಲಕ 54,000 ನೌಕರರ ಕಡಿತ ಮಾಡಲು ಯೋಚಿಸುತ್ತಿದೆ ಎಂದು ಇದಕ್ಕೆ ಮುಂಚೆ ವರದಿಯಾಗಿತ್ತು. ಇದಲ್ಲದೇ ಬಿಎಸ್ಸೆನ್ನೆಲ್ ಸ್ವಯಂ ನಿವೃತ್ತಿಯೋಜನೆಯನ್ನು (ವಿಆರ್‌ಎಸ್) ತನ್ನ ನೌಕರರಿಗೆ ಒದಗಿಸಲಿದೆ ಎಂದು ವರದಿಯಾಗಿತ್ತು. 
 

Recent Comments

Leave Comments

footer
Top