• 23 January 2020 22:12
Jai Kannada
Jai Kannada
Blog single photo
March 12, 2019

ಕೂದಲು ಕಸಿ ಮಾಡಿಕೊಂಡ 50 ಗಂಟೆಗಳಲ್ಲೇ ಸಾವನ್ನಪ್ಪಿದ ಉದ್ಯಮಿ 

 ಮುಂಬೈ: ಮುಂಬೈನ ಸಾಕಿ ನಾಕಾದ ಉದ್ಯಮಿಯೊಬ್ಬರು ತಮ್ಮ ಕೂದಲು ಕಸಿ ಮಾಡಿಕೊಂಡ 50 ಗಂಟೆಗಳಲ್ಲಿ ಸಾವನ್ನಪ್ಪಿದ್ದು, ಇಂತಹ ವಿಧಾನಗಳನ್ನು ಅನುಸರಿಸುವುದರ ಹಿಂದಿನ ಸುರಕ್ಷತೆ ಕುರಿತು ಅನುಮಾನಗಳನ್ನು ಹುಟ್ಟು ಹಾಕಿದೆ. ಶವಪರೀಕ್ಷೆ ವರದಿಗಳು ಇನ್ನೂ ಅಪೂರ್ಣವಾಗಿದ್ದರೂ, ಪ್ರಬಲವಾದ ಅಲರ್ಜಿ ಪ್ರತಿಕ್ರಿಯೆಯಿಂದ ಸಾವು ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.

43 ವರ್ಷದ ಶ್ರವನ್ ಕುಮಾರ್ ಚೌಧರಿ ಶುಕ್ರವಾರ ಪೊವಾಯ್‌ನ ಹಿರನಂದಿನಿ ಆಸ್ಪತ್ರೆಗೆ ಭೇಟಿ ನೀಡಿ ಉಸಿರಾಟದ ತೊಂದರೆ ಮತ್ತು ಮುಖ ಹಾಗೂ ಗಂಟಲಿನಲ್ಲಿ ಊತ ಕಾಣಿಸಿಕೊಂಡಿದೆಯೆಂದು ದೂರಿದ್ದರು. ವೈದ್ಯರು ಈ ಲಕ್ಷಣಗಳನ್ನು ಜೀವಕ್ಕೆ ಬೆದರಿಕೆಯೊಡ್ಡುವ  ಅನಾಫೈಲಾಕ್ಸಿಸ್ ಎಂಬ ಅಲರ್ಜಿ ಪ್ರತಿಕ್ರಿಯೆಯಿಂದ ಉಂಟಾಗಿದೆ ಎಂದು ತಿಳಿಸಿದರು.

ಇದರಿಂದ ಚೌಧರಿ ತೀವ್ರ ಆಘಾತಕ್ಕೆ ಗುರಿಯಾಗಿದ್ದರು.  ಅವರ ಹೃದಯಪರೀಕ್ಷೆ ಮಾಡಲು ಹೃದಯ ತಜ್ಞರನ್ನು ಕೂಡ ಕರೆಸಲಾಯಿತು. ಆದರೆ ಶನಿವಾರ ಬೆಳಿಗ್ಗೆ 6.45ಕ್ಕೆ ಅವರು ಇಹಲೋಕ ತ್ಯಜಿಸಿದರು. ಚೌಧುರಿ ಸುಮಾರು 15 ಗಂಟೆಗಳ ಅವಧಿಯ 9500 ಕೂದಲು ಕಸಿ ಚಿಕಿತ್ಸೆಯ ವಿಧಾನಕ್ಕೆ ಒಳಪಟ್ಟಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

Recent Comments

Leave Comments

footer
Top