• 19 November 2018 06:59
Jai Kannada
Jai Kannada
Blog single photo
December 30, 2017

ಫ್ರಾನ್ಸ್‌ನಲ್ಲಿ ನಗ್ನ ಗ್ರಾಹಕರ ರೆಸ್ಟೊರೆಂಟ್ 

ಪ್ಯಾರಿಸ್ : ನಗ್ನ ಜನರಿಗಾಗಿ ರೆಸ್ಟೊರೆಂಟ್ ಒಂದಿದೆ ಎಂದರೆ ನಂಬಬಹುದೇ? ಪ್ಯಾರಿಸ್‌ನಲ್ಲಿ ನಗ್ನರಿಗಾಗಿ ರೆಸ್ಟೊರೆಂಟ್ ತೆರೆಯಲಾಗಿದ್ದು, ಸಂಪೂರ್ಣ ವಿವಸ್ತ್ರರಾಗಿ ಮೈಮೇಲೆ ಯಾವುದೇ ಬಟ್ಟೆಯಿಲ್ಲದೇ ಬರುವವರಿಗೆ ಮಾತ್ರ ಇಲ್ಲಿ ಪ್ರವೇಶ ಕಲ್ಪಿಸಲಾಗಿದೆ.

ಆದರೆ ಒಂದೇ ಒಂದು ಷರತ್ತು- ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಅಥವಾ ಕಾಮಪ್ರಚೋದಕವಾಗಿ ವರ್ತಿಸಬಾರದು. ರೆಸ್ಟೊರೆಂಟ್ ಓ ನ್ಯಾಚುರಲ್ ‌ನಲ್ಲಿ ಊಟ ಮಾಡಲು ನೀವು ಮೊದಲೇ ರಿಸರ್ವೇಶನ್ ಮಾಡಿಸಿರಬೇಕು.

ಫ್ರೆಂಚ್ ಆಹಾರವನ್ನು ಮಾತ್ರ ಇಲ್ಲಿ ಬಡಿಸಲಾಗುತ್ತದೆ. ದಾರಿ ಹೋಕರು ಒಳಕ್ಕೆ ಇಣುಕಿ ನೋಡದಂತೆ ಕಿಟಕಿಗಳಿಗೆ ಉದ್ದನೆಯ ಕರ್ಟನ್ ಹಾಕಿರಲಾಗುತ್ತದೆ. ರೆಸ್ಟೊರೆಂಟ್‌ನಲ್ಲಿ ಮೂರು ಕೋರ್ಸ್ ಭೋಜನಕ್ಕೆ 3000 ರೂ. ಮಾತ್ರ ವೆಚ್ಚವಾಗುತ್ತದೆ.

 ವಸ್ತ್ರಗಳನ್ನು ಕ್ಲೋಕ್‌ರೂಂನಲ್ಲಿ ಮೊಬೈಲ್ ಫೋನ್, ಕ್ಯಾಮರಾಗಳಿದ್ದರೆ ಅವುಗಳ ಸಮೇತ ಇಟ್ಟು ಒಳಕ್ಕೆ ಹೋಗಬೇಕು. ಈ ರೆಸ್ಟೊರೆಂಟ್ 42 ವರ್ಷದ ಅವಳಿಗಳಾದ ಮೈಕ್ ಮತ್ತು ಸ್ಟೀಫನ್ ಸಾದಾ ಅವರ ಕನಸಿನ ಕೂಸು.

ವಿಮೆಯ ಮಾಜಿ ಮಾರಾಟಗಾರರಾಗಿದ್ದ ಅವರು ಸ್ವತಃ ನಗ್ನತೆಯ ಪ್ರತಿಪಾದಕರಲ್ಲ. ಆದರೆ ರಜಾದಿನಗಳಿಗೆ ಪ್ರಶಸ್ತ ತಾಣ ಎಂದು ಪ್ರಖ್ಯಾತವಾದ ಪ್ಯಾರಿಸ್‌ನಲ್ಲಿ ಹಣ ಮಾಡುವ ಒಂದು ಅವಕಾಶಕ್ಕಾಗಿ ಹುಡುಕಿ, ನಗ್ನ ರೆಸ್ಟೊರೆಂಟ್ ಆರಂಭಿಸಿದರು. ಪ್ಯಾರಿಸ್‌ನಲ್ಲಿ ಮೊಟ್ಟಮೊದಲ ನೇಕೆಡ್ ರೆಸ್ಟೊರೆಂಟ್ ಎಂದು ಹೆಸರುಪಡೆದಿದೆ.

Recent Comments

Leave Comments

footer
Top