• 19 March 2019 05:18
Jai Kannada
Jai Kannada
Blog single photo
March 11, 2019

ಬೃಹತ್ ಮೊತ್ತ ಪೇರಿಸಿ ಗೆಲುವಿನ ಗುಂಗಿನಲ್ಲಿದ್ದ ಭಾರತಕ್ಕೆ ಸೋಲು 

ಮೊಹಾಲಿ: ಏಕದಿನ ಪಂದ್ಯದಲ್ಲಿ 2-1ರಿಂದ ಮುನ್ನಡೆ ಸಾಧಿಸಿ ಗೆಲುವಿನ ಗುಂಗಿನಲ್ಲಿದ್ದ ವಿರಾಟ್ ಕೊಹ್ಲಿ ಪಡೆಗೆ ಟರ್ನರ್ ಮತ್ತು ಪೀಟರ್ ಹ್ಯಾಂಡ್ಸ್ ಕ್ಯಾಂಬ್ ಶಾಕ್ ನೀಡಿದ್ದಾರೆ. ಹ್ಯಾಂಡ್ ಸ್ಕಾಬ್ 8 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 115 ರನ್ ಗಳಿಸಿದರು. ಇದರಿಂದಾಗಿ ಭಾರತ ತಂಡ ಬೃಹತ್ ಸ್ಕೋರಿನ ಸವಾಲನ್ನು ಒಡ್ಡಿದರೂ ಲೆಕ್ಕಕ್ಕಿಲ್ಲದಂತಾಯಿತು.  ಆರಂಭದಲ್ಲಿ ಬ್ಯಾಟ್ ಮಾಡಿದ ಕೊಹ್ಲಿ ಪಡೆ 358 ರನ್ ಬೃಹತ್ ಮೊತ್ತವನ್ನು ಪೇರಿಸಿತ್ತು.  ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಆರಂಭದಲ್ಲೇ ಉತ್ತಮ ಅಡಿಪಾಯ ಹಾಕಿದರು.

ಶಿಖರ್ ಧವನ್ 143 ರನ್ ಸಿಡಿಸಿದರೆ,  ರೋಹಿತ್ ಶರ್ಮಾ 95 ರನ್ ಗಳಿಸಿ ಶತಕ ವಂಚಿತರಾದರು. ಉಳಿದಂತೆ ವಿರಾಟ್ ಕೊಹ್ಲಿ 7 ರನ್ , ಪಂತ್ 36 ರನ್ ಗಳಿಸಿ ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 358 ರನ್ ಬೃಹತ್ ಮೊತ್ತವನ್ನು ಪೇರಿಸಿತ್ತು. ಆಸೀಸ್ ತಂಡಕ್ಕೆ ಟೀಂ ಇಂಡಿಯಾ ಸ್ಕೋರಿನ ಗಡಿ ಮುಟ್ಟುವುದು ಅಸಾಧ್ಯವೆನ್ನುವುದು ಎಲ್ಲರ ನಿರೀಕ್ಷೆಯಾಗಿತ್ತು.

ಆದರೆ ಉಸ್ಮಾನಾ ಕ್ವಾಜಾ 91, ಪೀಟರ್ ಹ್ಯಾಂಡ್ಸ್‌ಕಾಂಬ್ 117 ಮತ್ತು ಟರ್ನರ್ ಅವರ 84 ರನ್ ನೆರವಿನೊಂದಿಗೆ ಆಸೀಸ್ ತಂಡ ಬೃಹತ್ ಮೊತ್ತವನ್ನು ದಾಟಿ 47.5 ಓವರುಗಳಲ್ಲೇ ಗುರಿಮುಟ್ಟಿತು. 

Recent Comments

Leave Comments

footer
Top