• 20 October 2019 19:39
Jai Kannada
Jai Kannada
Blog single photo
March 09, 2019

[ಜಟಿಲ ಶಸ್ತ್ರಚಿಕಿತ್ಸೆಯ ಮೂಲಕ ಮೆದುಳಿನ ಗಡ್ಡೆಯನ್ನು ತೆಗೆದ ವೈದ್ಯರು 

 ಮಂಗಳೂರು: ಶ್ರೀನಿವಾಸ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರು ಜಟಿಲವಾದ ನ್ಯೂರೋಸರ್ಜಿಕಲ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಅಂತಃಶೀರ್ಷಕಪಾಲದ ಜಾಗದಲ್ಲಿ ಬಹುಮಟ್ಟಿಗೆ 25-30ರಷ್ಟು ಜಾಗವನ್ನು ಅದು ಆವರಿಸಿತ್ತು. ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ನರರೋಗ ಶಸ್ತ್ರಚಿಕಿತ್ಸಕ ಡಾ. ದೀಪಕ್ ಸುರಪರಾಜು ಮಾತನಾಡುತ್ತಾ, 43 ವರ್ಷದ ಕಿನ್ನಿಗೋಳಿ ನಿವಾಸಿಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು.

ಅವರಿಗೆ ಮಂಪರು, ತೀವ್ರ ತಲೆನೋವು, ಗೊಂದಲ, ದೇಹದ ಬಲಭಾಗದಲ್ಲಿ ದುರ್ಬಲತೆ ಮತ್ತು ಹಾಸಿಗೆಹಿಡಿಯುವ ಸ್ಥಿತಿಯಲ್ಲಿದ್ದರು. ಆಸ್ಪತ್ರೆಗೆ ಸೇರಿಸಿ ಮೆದುಳಿನ ಎಂಆರ್‌ಐ ಸ್ಕ್ಯಾನಿಂಗ್ ಮಾಡಿದಾಗ, 8x6 ಸೆಂಮೀ ಅಗಲದ ಗಡ್ಡೆ ಕಂಡುಬಂತು ಇದುದರಿಂದ ಅಂಗಾಂಗಗಳ ಚಲನೆ, ಸಂಭಾಷಣೆ, ಜ್ಞಾನ ಮತ್ತು ನೆನಪಿಗೆ ಕಾರಣವಾಗುವ ಮೆದುಳಿನ ಪ್ರದೇಶಗಳು ಸಂಕುಚಿತಗೊಂಡು ಅಂತಃಶೀರ್ಷಕಪಾಲದ ಒತ್ತಡ ಉಂಟುಮಾಡಿತ್ತು. ಮಹಿಳೆಯನ್ನು ಜನವರಿ 5ರಂದು ಆಸ್ಪತ್ರೆಗೆ ಕರೆತಂದು ಎರಡು ದಿನಗಳ ಬಳಿಕ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು.

ವೈದ್ಯರು ಅತ್ಯಂತ ಜಟಿಲವಾದ ಸುಮಾರು 8 ಗಂಟೆಗಳ ಸಮಯ ಹಿಡಿದ ಶಸ್ತ್ರಚಿಕಿತ್ಸೆಯನ್ನು ಸುಧಾರಿತ ಆಪರೇಟಿವ್ ಮೈಕ್ರೋಸ್ಕೋಪ್ ಮತ್ತು ನಿಗಾ ಉಪಕರಣಗಳ ಮೂಲಕ ನಿರ್ವಹಿಸಿದರು. ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆ ಚೇತರಿಸಿಕೊಂಡಿದ್ದು, ಯಾವುದೇ ಆಸರೆಯಲಿಲ್ಲದೇ ಎರಡು ದಿನಗಳಲ್ಲಿ ಎಲ್ಲಾ ಚಟುವಟಿಕೆ ನಡೆಸುವಷ್ಟು ಶಕ್ತರಾಗಿದ್ದಾರೆ. ಸ್ಕಾನ್‌ಗಳ ಪರಿಶೀಲನೆಯಿಂದ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದು, ಯಾವುದೇ ವಿಕಿರಣ ಅಥವಾ ಕೆಮೊಥೆರಪಿ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. 

Recent Comments

Leave Comments

footer
Top