• 19 March 2019 05:55
Jai Kannada
Jai Kannada
Blog single photo
March 09, 2019

ಆಂಟಿ ಎಂದು ಕರೆದ ನೆಟ್ಟಿಗನಿಗೆ ತಿರುಗೇಟು ನೀಡಿದ ಕರೀನಾ ಕಪೂರ್ 

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಆಂಟಿ ಎಂದು ನೆಟ್ಟಿಗನೊಬ್ಬ ಕರೆದಿದ್ದರಿಂದ ನಟಿ ಕರೀನಾ ಕಪೂರ್, ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಸತತವಾಗಿ ಗುರಿಮಾಡುತ್ತಿರುವುದಕ್ಕೆ ಬೇಸರಗೊಂಡರು. 

ಮುಂಬರುವ ವೆಬ್ ಸೀರೀಸ್ ಟ್ರೇಲರ್‌ನಲ್ಲಿ, ಸೋನಾಕ್ಷಿಸಿನ್ಹಾ, ಕರಣ್ ಜೋಹರ್, ಸೋನಮ್ ಕಪೂರ್ ಅಹುಜಾ ಮತ್ತು ಕಪಿಲ್ ಶರ್ಮಾ ಅವರು ಆಯೋಜಕ ಮತ್ತು ನಟ ಆರ್ಬಾಜ್ ಖಾನ್ ಜತೆ ಚ್ಯಾಟ್ ಮಾಡುತ್ತಿದ್ದರು.

2 ನಿಮಿಷಗಳ ಉದ್ದದ ವಿಡಿಯೊದಲ್ಲಿ ಕರೀನಾಗೆ ಅರ್ಬಾಜ್ ಕಾಮೆಂಟ್ ಒಂದನ್ನು ತೋರಿಸಿ ನೀವೀಗ ಆಂಟಿಯಾಗಿದ್ದೀರಾ, ಹದಿಹರೆಯದ ಯುವತಿ ರೀತಿ ವರ್ತಿಸಬೇಡಿ ಎಂದು ತಮಾಷೆ ಮಾಡಿದ್ದ. ಅದನ್ನು ಓದಿದ ಬಳಿಕ, ಕರೀನಾ ನಗುತ್ತಿರುವುದು ಕಂಡುಬಂತು. ಬಳಿಕ ವಿಡಿಯೊದಲ್ಲಿ ಕರೀನಾ ಕೋಪಗೊಂಡಂತೆ ಕಂಡುಬಂದರು. ಸೆಲಿಬ್ರಿಟಿಗಳು, ನಟರು, ನಟಿಯರಿಗೆ ಯಾವುದೇ ಭಾವನೆ ಇರುವುದಿಲ್ಲ. ನಾವು ಎಲ್ಲವನ್ನೂ ಸ್ವೀಕರಿಸಬೇಕಾಗುತ್ತದೆ ಎಂದರು. 

ಸಾಮಾಜಿಕ ಜಾಲತಾಣದಲ್ಲಿ ಕರೀನಾ ಹೆಚ್ಚು ಭಾಗಿಯಾಗದಿದ್ದರೂ, ಕರೀನಾ ಟ್ರಾಲ್ ಮತ್ತು ಟೀಕೆಗೆ ಗುರಿಯಾಗುವುದು ತಪ್ಪಿಲ್ಲ. ಕರೀನಾ ಚಿತ್ರ ನಟನೆಗೆ ಸಂಬಂಧಿಸಿದಂತೆ ಸದ್ಯಕ್ಕೆ ಗುಡ್ ನ್ಯೂಸ್ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ

Recent Comments

Leave Comments

footer
Top