• 19 March 2019 05:20
Jai Kannada
Jai Kannada
Blog single photo
March 09, 2019

ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿರುವ ಇರ್ಫಾನ್ ಖಾನ್ ಅಮೆರಿಕದಿಂದ ವಾಪಸ್

ಮುಂಬೈ: ಕ್ಯಾನ್ಸರ್ ಚಿಕಿತ್ಸೆ ನಡುವೆ, ಇರ್ಫಾನ್ ಖಾನ್ ಇತ್ತೀಚೆಗೆ ಭಾರತಕ್ಕೆ ವಾಪಸಾಗಿದ್ದು, ಖಾನ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆಂದು ಮೂಲವೊಂದು ತಿಳಿಸಿದೆ. ಸುಮಾರು 8 ತಿಂಗಳ ಬಳಿಕ ಸ್ವದೇಶಕ್ಕೆ ಹಿಂತಿರುಗಿದ ನಟನನ್ನು ಮುಂಬೈ ವಿಮಾನನಿಲ್ದಾಣದಲ್ಲಿ ಗುರುತಿಸಲಾಯಿತು.

ನಟ ಬಿಳಿಯ ಶರ್ಟ್ ಮೇಲೆ ಪಿಂಕ್ ಜಾಕೆಟ್ ,ಕಾರ್ಗೊ ಪ್ಯಾಂಟ್‌ ಧರಿಸಿದ್ದರು. ಅದಕ್ಕೆ ಮ್ಯಾಚ್ ಆಗುವ ಹ್ಯಾಟ್ ಕೂಡ ಹಾಕಿದ್ದರು. ಛಾಯಾಚಿತ್ರಗ್ರಾಹಕರನ್ನು ತಪ್ಪಿಸಲು ತಮ್ಮ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದರು.

ವೃತ್ತಿಗೆ ಸಂಬಂಧಿಸಿದಂತೆ ಇರ್ಫಾನ್ ಟಿಗ್‌ಮಾನ್ಶು ಧುಲಿಯಾ ಅವರ ಹಿಂದಿ ಮೀಡಿಯಂ 2 ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲೇ ಈ ಚಿತ್ರದ ಶೂಟಿಂಗ್ ಆರಂಭಿಸಬೇಕಿತ್ತು. ಆದರೆ ಅಮೆರಿಕದಲ್ಲಿ  ಇರ್ಫಾನ್ ಚಿಕಿತ್ಸೆಯಿಂದ ಶೂಟಿಂಗ್ ವಿಳಂಬವಾಗಿದೆ.  

ಕಳೆದ ಮಾರ್ಚ್‌ನಲ್ಲಿ ಇರ್ಫಾನ್ ತಮ್ಮ ಅಭಿಮಾನಿಗಳಿಗೆ ತಾನು ಕ್ಯಾನ್ಸರ್ ಕಾಯಿಲೆಗೆ ಗುರಿಯಾಗಿರುವ ಸುದ್ದಿಯನ್ನು ಮುಟ್ಟಿಸಿದ್ದರು. ನಾನು ನ್ಯೂರೋಎಂಡೊಕ್ರೈನ್ ವ್ರಣದ ಕಾಯಿಲೆಯಿಂದ ನರಳುತ್ತಿದ್ದು, ಇದರಿಂದ ಹೊರಬರುವುದು ಕಠಿಣವಾದರೂ ಜನರ ಅಭಿಮಾನ, ಪ್ರೀತಿಯ ಶಕ್ತಿಯಿಂದ ನನ್ನಲ್ಲಿ ಆಶಾಗೋಪುರ ಚಿಗುರಿದೆ ಎಂದಿದ್ದರು. 

Recent Comments

Leave Comments

footer
Top