• 19 March 2019 05:19
Jai Kannada
Jai Kannada
Blog single photo
March 09, 2019

ವಿರೋಚಿತ ಸೋಲು ಕಂಡರೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ವಿರಾಟ್ ಕೊಹ್ಲಿ 

ರಾಂಚಿ: ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದ ಅತಿರಥ ಮಹಾರಥರ ದಾಖಲೆಗಳನ್ನು ಪುಡಿಗಟ್ಟುವ ಹಾದಿಯಲ್ಲಿದ್ದು, ಆಸ್ಟ್ರೇಲಿಯ ವಿರುದ್ಧ 3ನೇ ಏಕದಿನದಲ್ಲಿ  314 ರನ್ ಗುರಿಯನ್ನು ಬೆನ್ನಟ್ಟಿ ವಿರೋಚಿತ ಸೋಲನ್ನು ಕಂಡರೂ ವಿರಾಟ್ ಕೊಹ್ಲಿ ಮತ್ತೊಂದು ಶತಕ ಬಾರಿಸುವ ಮೂಲಕ ನೆರೆದಿದ್ದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

ಭಾರತ ಮತ್ತು ಆಸ್ಟ್ರೇಲಿಯಾದ ನಡುವೆ 50 ಓವರುಗಳ ಪಂದ್ಯಗಳಲ್ಲಿ ಅತೀ ಹೆಚ್ಚು ಶತಕಗಳನ್ನು ದಾಖಲಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಶುಕ್ರವಾರ ವಿರಾಟ್ ಕೊಹ್ಲಿ ಧೋನಿ, ಅಜರುದ್ದೀನ್ ಮತ್ತು ಗಂಗೂಲಿ ಬಳಿಕ 4000 ಏಕ ದಿನ ರನ್‌ಗಳನ್ನು ಗಳಿಸಿದ ನಾಲ್ಕನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಭಾರತದ ಏಕದಿನ ಪಂಜ್ಯದ ನಾಯಕರಾಗಿ ವಿರಾಟ್ ಕೊಹ್ಲಿ 19 ಶತಕಗಳನ್ನು ಬಾರಿಸಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಅತ್ಯುತ್ತಮ ಸ್ಕೋರಾದ ಅಜೇಯ 160 ರನ್ ಗಳಿಟ್ಸ್‌ಮನ್‌ಗಳ ವೈಫಲ್ಯದಿಂದ ಗುರಿಮುಟ್ಟುವುದು ಅಸಾಧ್ಯವೆನಿಸಿತು. 

Recent Comments

Leave Comments

footer
Top