• 20 January 2018 12:57
Jai Kannada
Jai Kannada
Blog single photo
December 30, 2017

ಪಾಕ್‌ಗೆ 255 ದಶಲಕ್ಷ ಡಾಲರ್ ನೆರವಿಗೆ ಅಮೆರಿಕ ಬ್ರೇಕ್ 

ನ್ಯೂಯಾರ್ಕ್: ಅಮೆರಿಕದ ಟ್ರಂಪ್ ಆಡಳಿತವು ಪಾಕಿಸ್ತಾನಕ್ಕೆ ನೀಡುವ 255 ದಶಲಕ್ಷ ಡಾಲರ್ ನೆರವಿಗೆ ಬ್ರೇಕ್ ಹಾಕಲು ನಿರ್ಧರಿಸಿದೆ.

ಪಾಕಿಸ್ತಾನದ ನೆಲದಲ್ಲಿ ಭಯೋತ್ಪಾದನೆ ಬೀಜ ಬಿತ್ತುವುದಲ್ಲದೇ ಭಯೋತ್ಪಾದನೆ ಸಂಘಟನೆಗಳ ವಿರುದ್ಧ ಕಾರ್ಯಾಚರಣೆಯಲ್ಲಿ ಪಾಕ್ ನಿಷ್ಕ್ರಿಯವಾಗಿರುವುದು ಇದಕ್ಕೆ ಕಾರಣ.

ಪಾಕಿಸ್ತಾನವು ದೊಂಬಿ, ಹಿಂಸಾಚಾರ ಮತ್ತು ಭಯೋತ್ಪಾದನೆ ಏಜಂಟರಿಗೆ ಸುರಕ್ಷಿತ ಸ್ವರ್ಗವಾಗಿದೆ ಎಂದು ಅಮೆರಿಕದ ಅಧ್ಯಕ್ಷರು ದೂರಿದ ಬಳಿಕ ಇವೆರಡು ರಾಷ್ಟ್ರಗಳ ನಡುವೆ ಸಂಬಂಧ ಹಳಸಿದೆ.

ಅಮೆರಿಕವು ಪಾಕಿಸ್ತಾನಕ್ಕೆ 2002ರಿಂದೀಚೆಗೆ 33 ಶತಕೋಟಿ ಡಾಲರ್ ಹಣದ ನೆರವನ್ನು ನೀಡಿದೆ. ಆದರೆ ಭಯೋತ್ಪಾದನೆ ಗುಂಪುಗಳ ವಿರುದ್ಧ ಕಾರ್ಯಾಚರಣೆ ಮಾಡುವ ತನಕ ಪಾಕಿಸ್ತಾನಕ್ಕೆ 255 ದಶಲಕ್ಷ ಡಾಲರ್ ಹಣವನ್ನು ತಡೆಹಿಡಿಯುವುದಾಗಿ ತಿಳಿಸಿದೆ.
 

Recent Comments

Leave Comments

footer
Top