• 19 March 2019 06:05
Jai Kannada
Jai Kannada
Blog single photo
March 08, 2019

1.4 ಕೋಟಿ ಪೌಂಡ್ : ಜಗತ್ತಿನ ಅತ್ಯಂತ ದುಬಾರಿ ಕಾರನ್ನು ಬಿಡುಗಡೆ ಮಾಡಿದ ಬುಗಾಟಿ 

ಇದು ಜಗತ್ತಿನ ಅತ್ಯಂತ ದುಬಾರಿ ದರದ ಕಾರು ಎನ್ನುವುದು ಬಹಿರಂಗವಾಗಿದೆ. ಇದನ್ನು ಖರೀದಿಸಲು ನೀನು 14 ದಶಲಕ್ಷ ಪೌಂಡ್ ಹಣವನ್ನು ತೆರೆಬೇಕಾಗುತ್ತದೆ. ಇಟಲಿಯಷಾರಾಮಿ ಕಾರು ತಯಾರಿಕೆ ಸಂಸ್ಥೆ ಬುಗಾಟ್ಟಿ ಲಾ ವಯಿಟರ್ ನಾಯರ್ ಕಾರನ್ನು ಈ ವರ್ಷದ ಜಿನೀವಾ ಅಂತಾರಾಷ್ಟ್ರೀಯ ಮೋಟರ್ ಶೋನಲ್ಲಿ ಬಿಡುಗಡೆ ಮಾಡಿದೆ.

ಬ್ಯಾಟ್ ಮೊಬೈಲ್ ಎಂದು ಮೋಟರ್ ಪ್ರೆಸ್ ಅಡ್ಡ ಹೆಸರು ಇಟ್ಟಿರುವ ಈ ಕಾರಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬುಗಾಟಿ ಸಂಸ್ಥೆ ವರ್ಣನೆ ಮಾಡಿತ್ತು. ಈ ಕಾರಿನ ಲಕ್ಷಣಗಳು 6 ಎಕ್ಸಾಸ್ಟ್ ಪೈಪ್‌ಗಳು, ಒಂದು 8 ಲೀಟರ್ ಡಬ್ಲ್ಯು 16 ಎಂಜಿನ್ ಮತ್ತು ಗಂಟೆಗೆ 261 ಮೈಲಿ ವೇಗದಲ್ಲಿ ಸಂಚರಿಸುತ್ತದೆ. 

ಒಂದು ಕಾರನ್ನು ಈಗಾಗಲೇ ಖರೀದಿಸಲಾಗಿದ್ದು, ಹೊಸ ಮಾಲೀಕರ ಗುರುತನ್ನು ಈವರೆಗೂ ಬಹಿರಂಗ ಮಾಡಿಲ್ಲ. ಬಹುಶಃ ಈ ಕಾರು ಖರೀದಿಸಿದ್ದು, ಫರ್ಡಿನಾಂಡ್ ಪೀಚ್ ಇರಬಹುದೆಂದು ಭಾವಿಸಲಾಗಿದೆ. ವೋಲ್ಕ್ಸ್ ವ್ಯಾಗನ್ ಮಾಜಿ ಅಧ್ಯಕ್ಷ ಪೀಚ್ ಅವರಿಗೆ ಕಾರಿನ ಬೆಲೆಯಲ್ಲಿ ಡಿಸ್ಕೌಂಟ್ ಕೊಟ್ಟಿರಬಹುದೆಂದು ಅಂಜಾಜಿಸಲಾಗಿದೆ.

Recent Comments

Leave Comments

footer
Top