ಪ್ಯಾರಿಸ್: ಫ್ರಾನ್ಸ್ನಲ್ಲಿ ಬರ್ಡ್ಮ್ಯಾನ್ ಎಂದು ಹೆಸರಾದ ಕ್ರಿಶ್ಚಿಯನ್ ಮೌಲೆಕ್ ತನ್ನ ಮೈಕ್ರೋಲೈಟ್ ಹಗುರ ವಿಮಾನದಲ್ಲಿ ಹಕ್ಕಿಗಳ ಹಿಂಡಿನೊಂದಿಗೆ ಪ್ರಯಾಣಿಸುತ್ತಾನೆ.
ಪಕ್ಷಿಗಳು ಅವನನ್ನು ಹಿಂಬಾಲಿಸುವಂತೆ ಮಾಡುವುದಕ್ಕೆ ಅನೇಕ ವರ್ಷಗಳಿಂದ ತರಬೇತಿ ನೀಡುತ್ತಿದ್ದು, ಬೇಟೆಗಾರರ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳುವುದಕ್ಕೆ ವಲಸೆ ಮಾರ್ಗಗಳನ್ನು ಪಕ್ಷಿಗಳಿಗೆ ತೋರಿಸುತ್ತಿದ್ದ.
ನಾನು ಈ ಪಕ್ಷಿಗಳ ದತ್ತುತಂದೆ. ಅವುಗಳಿಗೆ ಮನೆಯಲ್ಲಿ ತಂಗುವ ವ್ಯವಸ್ಥೆ ಮಾಡಿದ್ದು, ಆರಂಭದಿಂದ ಅವುಗಳ ಜತೆಯಲ್ಲೇ ಮಲಗುತ್ತೇನೆ. ಬಳಿಕ ನಾವು ದೂರದ ಪ್ರಯಾಣಕ್ಕೆ ಜತೆಯಾಗಿಯೇ ಹೋಗುತ್ತೇವೆ ಎಂದು ಪಕ್ಷಿಗಳ ಜತೆಗಿನ ತನ್ನ ಬಾಂಧವ್ಯವನ್ನು ಹೇಳಿಕೊಂಡಿದ್ದಾನೆ.
1990ರಲ್ಲಿ ಕ್ರಿಶ್ಚಿಯನ್ ಮೌಲೆಕ್ 30 ಬಾತುಕೋಳಿಗಳು ತನ್ನನ್ನು ಹಿಂಬಾಲಿಸಿಕೊಂಡು ಬರುವುದರ ಜತೆಗೆ 2000 ಕಿಮೀ ಸ್ವೀಡನ್ನಿಂದ ಜರ್ಮನಿ ಪ್ರಯಾಣವನ್ನು ಪೂರ್ಣಗೊಳಿಸಿದ್ದಾನೆ.
ಮೊದಲ ಪ್ರಯಾಣದಲ್ಲೇ ಈ ತಂತ್ರ ಫಲಿಸಿದೆ.
ಜತೆಯಲ್ಲಿ ಪ್ರಯಾಣಿಸುತ್ತಿದ್ದ ಪಕ್ಷಿಗಳು ಹೊಸ ವಲಸೆ ಮಾರ್ಗವನ್ನು ನೆನಪಿನಲ್ಲಿಟ್ಟುಕೊಂಡು ಪ್ರತಿ ವರ್ಷ ತಮ್ಮ ಮರಿಗಳಿಗೆ ಕಲಿಸುತ್ತಿವೆ. ನಾವು ಮೊದಲಿಗೆ 30 ಪಕ್ಷಿಗಳೊಂದಿಗೆ ನಮ್ಮ ಯೋಜನೆ ಆರಂಭಿಸಿದೆವು ಎಂದು ಅವನು ಹೇಳಿದ್ದಾನೆ.
ಆದರೆ ಈ ಪ್ರಾಜೆಕ್ಟ್ಗಳಿಗೆ ಹಣಕಾಸು ಒದಗಿಸುವುದು ಕಷ್ಟ. ಆದ್ದರಿಂದ ಕ್ರಿಶ್ಚಿಯನ್ ಸಾರ್ವಜನಿಕರಿಗೆ ಮೈಕ್ರೋಲೈಟ್ ಹಗುರ ವಿಮಾನ ಸೇವೆ ನೀಡುವ ಕಂಪೆನಿಯನ್ನು ಆರಂಭಿಸಿದ್ದಾನೆ.
Recent Comments