• 19 March 2019 05:18
Jai Kannada
Jai Kannada
Blog single photo
March 07, 2019

 ಪ್ರತಿ 10 ಗ್ರಾಂ.ಗೆ 360 ಕುಸಿದ ಚಿನ್ನದ ದರ 33,070 ರೂ.ಗೆ ಇಳಿಕೆ 


ನವದೆಹಲಿ: ದುರ್ಬಲ ಜಾಗತಿಕ ಮಾರುಕಟ್ಟೆ ಮತ್ತು ಸ್ಥಳೀಯ ಆಭರಣ ವ್ಯಾಪಾರಿಗಳ ಬೇಡಿಕೆ ಕುಸಿತದಿಂದಾಗಿ ಚಿನ್ನದ ದರಗಳು ಚಿನಿವಾರ ಪೇಟೆಯಲ್ಲಿ ಪ್ರತಿ 10 ಗ್ರಾಂ.ಗೆ 360 ರೂ. ಕುಸಿದು 33, 070 ರೂ.ಗೆ ಇಳಿದಿದೆ.

 ಚಿನ್ನದ ಬೆನ್ನ ಹಿಂದೆಯೇ ಬೆಳ್ಳಿ ಕೂಡ ಪ್ರತಿ ಕೆಜಿಗೆ 520 ರೂ. ಕುಸಿದು 38, 980 ರೂ.ಗಳನ್ನು ಮುಟ್ಟಿದೆ. ಕೈಗಾರಿಕೆ ಘಟಕಗಳ ಮತ್ತು ನಾಣ್ಯ ತಯಾರಕರ ಖರೀದಿಯಲ್ಲಿ ತಗ್ಗಿದ್ದರಿಂದ ಈ ಬೆಳವಣಿಗೆ ಉಂಟಾಗಿದೆ.

ಇದಲ್ಲದೇ ರೂಪಾಯಿ ಸದೃಢವಾಗುತ್ತಿರುವುದು ಹಳದಿ ಲೋಹದ ಮೇಲೆ ಒತ್ತಡ ಹಾಕಿದೆ. ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಶೇ. 99.9 ಮತ್ತು ಶೇಕಡ 99.5 ಶುದ್ಧ ಚಿನ್ನವು ಕ್ರಮವಾಗಿ ಪ್ರತಿ 10 ಗ್ರಾಂ.ಗಳಿಗೆ 360 ರೂ.ಗಳು ಕುಸಿದು 33,070 ಮತ್ತು 32, 900 ರೂ.ಗಳಿಗೆ ಕುಸಿದಿದೆ. 

Recent Comments

Leave Comments

footer
Top