• 19 March 2019 05:35
Jai Kannada
Jai Kannada
Blog single photo
March 07, 2019

ಉರಿ ಯಶಸ್ಸಿನಿಂದ ಪ್ರೇರಿತರಾಗಿ ಬಾಲಾಕೋಟ್ ಏರ್ ಸ್ಟ್ರೈಕ್ ಚಿತ್ರ ನಿರ್ಮಾಣಕ್ಕೆ ಬನ್ಸಾಲಿ ನಿರ್ಧಾರ 

ಮುಂಬೈ: ನೈಜಘಟನೆ ಆಧಾರಿತ, ಸಾಹಸ ದೃಶ್ಯಗಳಿರುವ ಚಿತ್ರಗಳು ಬಾಕ್ಸಾಫೀಸ್ ಕೊಳ್ಳೆಹೊಡೆಯುವುದು ಗ್ಯಾರಂಟಿ ಎನ್ನುವುದು ಉರಿ ಚಿತ್ರದಿಂದ ಸಾಬೀತಾಗಿದೆ. ಬಾಲಿವುಡ್ ಉರಿ, ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾ ಬಾಕ್ಸಾಫೀಸಿನಲ್ಲಿ ಸೂರೆ ಹೊಡೆಯಿತು. ಉರಿ ಚಿತ್ರ ಉರಿ ಸೇನಾ ನೆಲೆಯ ಮೇಲಿನ ದಾಳಿಗೆ ಪ್ರತೀಕಾರದ ಕ್ರಮವಾಗಿ ಸೈನಿಕರ ಸರ್ಜಿಕಲ್ ದಾಳಿಯ ನೈಜ ಘಟನೆ ಆಧಾರಿತ ಚಿತ್ರ.

 ಉರಿ ಚಿತ್ರಯ ಯಶಸ್ಸಿನ ಬಳಿಕ  ಪುಲ್ವಾಮಾ ದಾಳಿ ಮತ್ತು ಅದರ ಬಳಿಕ ನಡೆದ ಘಟನೆಯಿಂದ ಪ್ರೇರೇಪಿತರಾಗಿ ಚಿತ್ರನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಬಾಲಿವುಡ್ ಸಿನಿಮಾ ಮಾಡಲು ಹೊರಟಿದ್ದಾರೆ. ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಯಶಸ್ವಿ ಚಿತ್ರ ಪದ್ಮಾವತ್ ಬಳಿಕ ಬಾಲಾಕೋಟ್ ಏರ್ ಸ್ಟ್ರೈಕ್ ಚಿತ್ರವನ್ನು ಅವರು ತೆರೆಯ ಮೇಲೆ ತರಲು ನಿರ್ಧರಿಸಿದ್ದಾರೆ.  ಪುಲ್ವಾಮಾ ದಾಳಿಯ 12ನೇ ದಿನವೇ ಏರ್ ಸ್ಟ್ರೈಕ್ ಮೂಲಕ ಬಾಲಾಕೋಟ್ ಶಿಬಿರ ಧ್ವಂಸ ಮಾಡಲಾಗಿತ್ತು.  ಉರಿ ಸರ್ಜಿಕಲ್ ಸ್ಟ್ರೈಕ್ ಹೇಗಾಯಿತು,

ಪಾಕ್ ಉಗ್ರರ ಮೇಲೆ ದಾಳಿ ಮಾಡಿದ್ದು ಹೇಗೆ ಮುಂತಾದ ರೋಚಕ ಸಂಗತಿಗಳಿಂದ ಕೂಡಿದ ಉರಿ ಚಿತ್ರ ಭಾರತೀಯ ಸೈನಿಕರ ಶೌರ್ಯ, ಸಾಹಸಗಳನ್ನು ಬಿಂಬಿಸಿತ್ತು. ಅಲ್ಲದೇ ಇದು ದೇಶಭಕ್ತಿ ಆಧಾರಿತ ಚಿತ್ರವಾದ್ದರಿಂದ ಚಿತ್ರಪ್ರೇಮಿಗಳನ್ನು ಆಕರ್ಷಿಸಿತು. ಅದೇ ರೀತಿ ಬಾಲಾಕೋಟ್ ಏರ್ ಸ್ಟ್ರೈಕ್ ಚಿತ್ರದಲ್ಲಿ ಪುಲ್ವಾಮಾ ದಾಳಿ, ಭಾರತ ಬಾಲಾಕೋಟ್‌ನಲ್ಲಿ ಮಿಂಚಿನ ವೇಗದಲ್ಲಿ ನಡೆಸಿದ ಏರ್‌ಸ್ಟ್ರೈಕ್, ಎಫ್-16 ಉರುಳಿಸುವಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಅವರ ಸಾಹಸ ದೃಶ್ಯಗಳು ಬೆಳ್ಳಿತೆರೆಯ ಮೇಲೆ ವಿಜೃಂಭಿಸಲಿವೆ. 

 ಏರ್ ಸ್ಟ್ರೈಕ್ ಚಿತ್ರದಲ್ಲಿ ವಿಕಿ ಕೌಶಲ್ ಅವರನ್ನು ಹೀರೊ ಮಾಡಲು ಬನ್ಸಾಲಿ ಇಚ್ಛಿಸಿದ್ದಾರೆಂದು ಗೊತ್ತಾಗಿದೆ. ಈ ನಡುವೆ ಬನ್ಸಾಲಿ ಚಿತ್ರದಲ್ಲಿ ಅಭಿನಂದನ್ ಪಾತ್ರದಲ್ಲಿ ನಟಿಸಲು ಜಾನ್ ಅಬ್ರಾಹಂ ಆಸಕ್ತಿ ತೋರಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಹೀರೋ ಯಾರೆಂಬುದನ್ನು ಬನ್ಸಾಲಿ ಇನ್ನೂ ಬಹಿರಂಗಮಾಡಿಲ್ಲ.

Recent Comments

Leave Comments

footer
Top