• 19 March 2019 05:18
Jai Kannada
Jai Kannada
Blog single photo
March 07, 2019

ಸುಮಲತಾ ಚುನಾವಣೆ ಕಣಕ್ಕೆ:  ಬದಲಾದ ಜೆಡಿಎಸ್ ಚರ್ಯೆ 

ಮಂಡ್ಯ: ಅಂಬರೀಷ್ ಅವರನ್ನು ಹತ್ತಿರದಿಂದ ನೋಡಿದವರು ಮಂಡ್ಯ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದರು ಎಂದು ಹೇಳುವುದನ್ನು ಕೇಳಿದ್ದೇವೆ. ಸಹಾಯ ಯಾಚಿಸಿ ಹೋದವರನ್ನು ಅಂಬರೀಷ್ ವಾಪಸ್ ಕಳಿಸಿದ ಉದಾಹರಣೆಯೇ ಇಲ್ಲವೆಂದು ಜನರು ಅಂಬರೀಷ್ ವ್ಯಕ್ತಿತ್ವವನ್ನು ಕೊಂಡಾಡಿದ್ದರು. ಹೀಗಾಗಿ ಅಂಬರೀಷ್ ನಿಧನರಾದಾಗ ಅಪಾರ ಸಂಖ್ಯೆಯಲ್ಲಿ ಜನರು ನೆರೆದು ಅವರಿಗೆ ಅಂತಿಮ ನಮನ ಸಲ್ಲಿಸಿದರು. ಅಂಬರೀಷ್ ಅವರ ಪ್ರೀತಿವಾತ್ಸಲ್ಯವನ್ನು ನೆನೆದು ಕಣ್ಣೀರಿಟ್ಟಿದ್ದರು.  ಅಂಬರೀಷ್ ಬದುಕಿದ್ದಾಗ ಕುಮಾರಸ್ವಾಮಿ ಭೇಟಿ ಮಾಡಿ ಅವರ ಜತೆ ರಾಜಕೀಯ ಬೆಳವಣಿಗೆಗಳ ಚರ್ಚೆ ನಡೆಸಿದ್ದರು.

ಆದರೆ ಈಗ ಅಂಬರೀಷ್ ಸತ್ತ ಮೇಲೆ ಜೆಡಿಎಸ್ ಚರ್ಯೆಯೇ ಬದಲಾಗಿದೆ. .  ಲೋಕಸಭೆ ಚುನಾವಣೆಗೆ ಕಣಕ್ಕೆ ಇಳಿಯುವುದಾಗಿ ಹೇಳಿದ ಮೇಲೆ ಅಂಬರೀಷ್ ಮತ್ತು ಸುಮಲತಾ ಬಗ್ಗೆ ಜೆಡಿಎಸ್ ಅಭಿಪ್ರಾಯವೇ ಬದಲಾಗಿದೆ.  ಮದ್ದೂರಿನ ಕೊಳೆಗೇರಿ ಅಭಿವೃದ್ಧಿ ಕಾಮಗಾರಿ ಚಾಲನೆ ವೇಳೆ ಮಾತನಾಡುತ್ತಿದ್ದ ಸಚಿವ ಡಿ.ಸಿ. ತಮ್ಮಣ್ಣ ಅಂಬರೀಷ್ ಮನೆಗೆ ಹೋದಾಗ ಈಯಮ್ಮ  ಎಷ್ಟು ಜನರಿಗೆ ಕುಡಿಯಲು ಒಂದು ಗ್ಲಾಸ್ ನೀರು ಕೊಟ್ಟಿದ್ದಾರೆ,  ಅಂಬರೀಷ್ ಸಚಿವರಾಗಿದ್ದಾಗ ಸುಮಲತಾ ಎಷ್ಟು ಜನರನ್ನು ಮಾತಾಡಿಸಿದ್ದಾರೆ, ಎಷ್ಟು ಜನರ ಕಷ್ಟಗಳ ಬಗ್ಗೆ ಕಾಳಜಿ ವಹಿಸಿದ್ದಾರೆ ಮೊದಲಾದ ಪ್ರಶ್ನೆಗಳನ್ನು ಸಚಿವ ಡಿ.ಸಿ. ತಮ್ಮಣ್ಣ ಕೇಳುವ ಮೂಲಕ ರೈತರ ಮಗ ನಿಖಿಲ್ ಅವರಿಗೆ ಮತ ಹಾಕಿ ಗೆಲ್ಲಿಸಿ ಎಂದು ಜನತೆಗೆ ಮನವಿ ಮಾಡಿದ್ದಾರೆ.

ತಮ್ಮಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸುಮಲತಾ ತಮ್ಮ ಪತಿ ಅಂಬರೀಷ್ ಆಗಲೀ ನಾನಾಗಲೀ ಮಾಡಿದ ಉಪಕಾರವನ್ನು ಯಾವತ್ತೂ ಹೇಳಿಕೊಳ್ಳುತ್ತಿರಲಿಲ್ಲ. ತಮ್ಮಣ್ಣ ಅವರ ಆರೋಪಕ್ಕೆ ಉತ್ತರಿಸುವ ಸಮಯ ಈಗ ನಮಗೆ ಸಿಕ್ಕಿದೆ ಎಂದು ಸುಮಲತಾ ಹೇಳಿದರು.

Recent Comments

Leave Comments

footer
Top