• 19 March 2019 05:21
Jai Kannada
Jai Kannada
Blog single photo
March 06, 2019

ವಿವಾಹ 'ಇನ್ ಏಪ್ರಿಲ್, ವಿ ಮೇ' ಎಂದು ಹಾಸ್ಯದ ಧಾಟಿಯಲ್ಲಿ ಫರ್ಹಾನ್ ಅಕ್ತರ್ ಉತ್ತರ 

ಫರ್ಹಾನ್ ಅಕ್ತರ್ ಮತ್ತು ಶಿಬಾನಿ ದಂಡೇಕರ್ ಪರಸ್ಪರ ಪ್ರೀತಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಕಳೆದ ವರ್ಷ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದು, ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಆರತಕ್ಷತೆ ಸಮಾರಂಭದಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು.

ಆಗಿನಿಂದ ಅವರಿಬ್ಬರ ವಿವಾಹದ ಯೋಜನೆ ಬಗ್ಗೆ ಕಂಡಲ್ಲೆಲ್ಲಾ ಪತ್ರಕರ್ತರು ಪ್ರಶ್ನೆಗಳನ್ನು ಕೇಳುತ್ತಿದ್ದರು. ಇತ್ತೀಚೆಗೆ ಟಾಕ್ ಶೋ ಒಂದರಲ್ಲಿ ನಾವು ಮದುವೆಯಾಗುವುದು ಯಾವಾಗ, ಏಪ್ರಿಲ್ ಅಥವಾ ಮೇ ತಿಂಗಳಾ ಎಂದು ಶಿಬಾನಿ ಮಾಧ್ಯಮದವರು ಪ್ರಶ್ನಿಸುವ ರೀತಿಯಲ್ಲೇ ಫರ್ಹಾನ್‌ಗೆ ಕೇಳಿದಾಗ,  ಇನ್ ಏಪ್ರಿಲ್, ವಿ ಮೇ ಎಂದು ಫರ್ಹಾನ್ ಹಾಸ್ಯಲೇಪಿತವಾಗಿ ಉತ್ತರಿಸಿದ್ದರು.

ಏತನ್ಮಧ್ಯೆ ಚಿತ್ರಗಳಿಗೆ ಸಂಬಂಧಿಸಿದಂತೆ ಫರ್ಹಾನ್ ಮುಂಬೈನಲ್ಲಿ ಸ್ಕೈ ಈಸ್ ಪಿಂಕ್ ಚಿತ್ರದ ಕೊನೆಯ ಹಂತದಲ್ಲಿ ನಟಿಸುತ್ತಿದ್ದಾರೆ. ದಿಲ್ ದಡಾಕ್ನೆ ದೊ ಸಹನಟಿ ಪ್ರಿಯಾಂಕ ಚೋಪ್ರಾ ಜೋನ್ಸ್ ಜತೆ ಪುನರ್ಮಿಲನಕ್ಕೆ ಈ ಚಿತ್ರ ಅವಕಾಶ ನೀಡಿದೆ.
ಸ್ಕೈ ಈಸ್ ಪಿಂಚ್ ಚಿತ್ರದಲ್ಲಿ ಜೈರಾ ವಾಸೀಂ ಕೂಡ ಮುಖ್ಯ ಪಾತ್ರದಲ್ಲಿದ್ದು, ಪ್ರಿಯಾಂಕ ಮತ್ತು ಫರ್ಹಾನ್ ಪುತ್ರಿಯ ಪಾತ್ರದಲ್ಲಿ ನಟಿಸಿದ್ದಾರೆ. 

Recent Comments

Leave Comments

footer
Top