• 19 March 2019 05:19
Jai Kannada
Jai Kannada
Blog single photo
March 06, 2019

ಯಜಮಾನ ಚಿತ್ರವನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿ ನಟಸಾರ್ವಬೌಮ 

ಸ್ಯಾಂಡಲ್ ವುಡ್‌ನ ಇಬ್ಬರು ದೊಡ್ಡ ಸ್ಟಾರ್ ನಟರು ತಮ್ಮ ಬ್ಲಾಕ್ ಬಸ್ಟರ್ ಚಿತ್ರಗಳ ಮೂಲಕ 2019ರಲ್ಲಿ ಶುಭಾರಂಭ ಮಾಡಿದ್ದಾರೆ. ನಾವು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಚಿತ್ರಗಳ ಬಗ್ಗೆ ಮಾತನಾಡುತ್ತಿರುವುದು.

ನಾಟಸಾರ್ವಭೌಮ ಅಪ್ಪು ಅವರ ಮೊದಲ ಹಾರರ್-ಥ್ರಿಲ್ಲರ್ ಚಿತ್ರ. ಈ ಚಿತ್ರ ಬಾಕ್ಸೀಫಿಸಿನಲ್ಲಿ ಚೆನ್ನಾಗಿ ನಿರ್ವಹಿಸಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಯಜಮಾನ ಚಿತ್ರದ ಬಗ್ಗೆ ಇನ್ನಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ನಟ ಸಾರ್ವಬೌಮ ಯಜಮಾನ ಚಿತ್ರವನ್ನು ಹಿಂದಿಕ್ಕಿ ವರ್ಷದ ಉತ್ತಮ ಆರಂಭಿಕ ಚಿತ್ರವಾಗಿ ಅಗ್ರಸ್ಥಾನದಲ್ಲಿ ಉಳಿದಿದೆ.

ಯಜಮಾನ ಯಾವುದೇ ಭಾಷೆಯಲ್ಲಿ ಡಬ್ ಆಗದೇ ಭಾರತದಲ್ಲಿ 8000 ಪ್ರದರ್ಶನದೊಂದಿಗೆ ತೆರೆಗೆ ಬಂತು. ಅದರ ಬಿಡುಗಡೆಯ ದಿನವೇ 7 ರಿಂದ 8 ಕೋಟಿ ರೂ. ಬಾಚಿಕೊಳ್ಳುತ್ತದೆಂದು ನಿರೀಕ್ಷಿಸಲಾಗಿತ್ತು. ಆದರೆ ಅದು 6.7 ಕೋಟಿ ರೂ. ಮಾತ್ರ ಮೊದಲ ದಿನ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ನಟಸಾರ್ವಬೌಮ ನಂ. 1 ಸ್ಥಾನದಲ್ಲಿದ್ದು ಮೊದಲ ದಿನದ ಪ್ರದರ್ಶನದಲ್ಲಿ 7.50 ಕೋಟಿ ರೂ. ಬಾಚಿಕೊಂಡಿದೆ.

Recent Comments

Leave Comments

footer
Top