• 23 September 2019 04:51
Jai Kannada
Jai Kannada
Blog single photo
March 04, 2019

ಪಾಕ್ ಕ್ರಿಕೆಟ್ ಟೀಂ ನಿಷೇಧ: ಬಿಸಿಸಿಐ ಮನವಿ ತಳ್ಳಿಹಾಕಿದ ಐಸಿಸಿ 

ಮುಂಬೈ: ಭಯೋತ್ಪಾದನೆ ಹುಟ್ಟು ಹಾಕುವ ರಾಷ್ಟ್ರಗಳ ಜತೆ ಸಂಬಂಧ ಕಡಿದುಕೊಳ್ಳಬೇಕೆಂಬ ಬಿಸಿಸಿಐ ಮನವಿಯನ್ನು ಐಸಿಸಿ ತಳ್ಳಿಹಾಕಿದೆ. ಇಂತಹ ವಿಷಯಗಳಲ್ಲಿ ಐಸಿಸಿ ಯಾವುದೇ ಪಾತ್ರವಹಿಸುವುದಿಲ್ಲ ಎಂದು ತಿಳಿಸಿದೆ.

 ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಬಿಸಿಸಿಐ ಐಸಿಸಿಗೆ ಬರೆದ ಪತ್ರದಲ್ಲಿ ಭಯೋತ್ಪಾದನೆಗೆ ಆಶ್ರಯ ನೀಡುವ ರಾಷ್ಟ್ರಗಳ ಜತೆ ಸಂಪರ್ಕ ಕಡಿದುಕೊಳ್ಳುವಂತೆ ಪಾಕಿಸ್ತಾನವನ್ನು ಪರೋಕ್ಷವಾಗಿ ಉದಾಹರಿಸಿ ಮನವಿ ಮಾಡಿತ್ತು.

ಬಿಸಿಸಿಐ ಪತ್ರವು ನಿರ್ದಿಷ್ಟವಾಗಿ ಪಾಕಿಸ್ತಾನವನ್ನು ಉಲ್ಲೇಖಿಸಿರಲಿಲ್ಲ. ಶನಿವಾರ ಅಧ್ಯಕ್ಷ ಶಶಾಂಕ್ ಮನೋಹರ್ ಅಧ್ಯಕ್ಷತೆಯ ಐಸಿಸಿ ಮಂಡಳಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಯಿತು. ಉಸ್ತುವಾರಿ ಕಾರ್ಯದರ್ಶಿ ಅಮಿತಾಬ್ ಚೌಧರಿ ಮಂಡಳಿಯಲ್ಲಿ ಬಿಸಿಸಿಐ ಪ್ರಾತಿನಿಧ್ಯ ಹೊಂದಿದ್ದರು
ಮಂಡಳಿ ಸಭೆಯ ಕೊನೆಯ ದಿನ ಐಸಿಸಿ ಸಿಇಒ ಡೇವಿಡ್ ರಿಚರ್ಡ್‌ಸನ್ ಮಾತನಾಡುತ್ತಾ, ನೀವು ನಿರೀಕ್ಷಿಸಿರುವಂತೆ ವಿಶ್ವ ಕ್ರೀಡಾಕೂಟಕ್ಕೆ ಐಸಿಸಿಯು ಇಸಿಬಿ ಜತೆ ಸಹಭಾಗಿತ್ವದಲ್ಲಿ ಸದೃಢ ಭದ್ರತಾ ಯೋಜನೆಯನ್ನು ವಿಶ್ವಕಪ್ ಕ್ರಿಕೆಟ್‌ಗೆ ನಿಯೋಜಿಸಲಿದೆ ಎಂದು ತಿಳಿಸಿದರು.

 ಅಗತ್ಯ ಬಿದ್ದರೆ ಭದ್ರತಾ ಕ್ರಮಗಳನ್ನು ಇನ್ನಷ್ಟು ಮೇಲ್ದರ್ಜೆಗೆ ಏರಿಸುವುದಾಗಿ ತಿಳಿಸಿದರು. ಭಾರತ ಕ್ರಿಕೆಟ್ ತಂಡ ಜೂನ್ 16ರಂದು ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಆಡುವುದಕ್ಕೆ ನಿಗದಿಯಾಗಿದೆ. ಆಗ ಬಿಸಿಸಿಐ ಇಕ್ಕಟ್ಟಿಗೆ ಸಿಕ್ಕಿಬಿದ್ದಿದ್ದು, ಪಾಕಿಸ್ತಾನದ ವಿರುದ್ಧ ಆಡಲೇಬೇಕಾದ ಪರಿಸ್ಥಿತಿ ಉಂಟಾಗಿದೆ. ಪಾಕಿಸ್ತಾನದ ವಿರುದ್ಧ ಆಡದಿದ್ದರೆ ಭಾರತ ಪಾಯಿಂಟ್ ಕಳೆದುಕೊಳ್ಳಲಿದ್ದು, ವಿಶ್ವ ಕಪ್ ಗೆಲ್ಲುವುದಕ್ಕೆ ಇದರಿಂದ ಅಡ್ಡಿಯಾಗುತ್ತದೆ. ಆದರೆ ಕೆಲವು ಹಿರಿಯ ಆಟಗಾರರು ಪಾಕಿಸ್ತಾನವನ್ನು ಸೋಲಿಸುವ ಮೂಲಕ  ಪ್ರತೀಕಾರ ತೀರಿಸಿಕೊಳ್ಳುವಂತೆ ಬಿಸಿಸಿಐಗೆ ಸಲಹೆ ನೀಡಿದ್ದಾರೆ. 
 

Recent Comments

Leave Comments

footer
Top