• 19 March 2019 05:20
Jai Kannada
Jai Kannada
Blog single photo
March 02, 2019

ಧೋನಿ, ಜಾಧವ್ ಜತೆಯಾಟ: ಭಾರತಕ್ಕೆ ಆಸೀಸ್ ವಿರುದ್ಧ ಏಕದಿನ ಪಂದ್ಯದಲ್ಲಿ ಜಯ 

ಹೈದರಾಬಾದ್: ಭಾರತದ ಕಪ್ತಾನ ವಿರಾಟ್ ಕೊಹ್ಲಿ ಟಾಸ್ ಸೋತ ಬಳಿಕ ಟಿ 20 ಸರಣಿ ಮತ್ತು ಐದು ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಚೇಸ್ ಮಾಡದೇ ಬೇರೆ ದಾಱಿ ಇರಲಿಲ್ಲ. ವಿಕೆಟ್ ನಿಧಾನ ಸ್ವರೂಪದ್ದಾಗಿದ್ದರೂ ಭಾರತ ತಂಡದ ಆಟಗಾರರು ಸ್ಟೇಡಿಯಂನಲ್ಲಿ ತುಂಬಿದ್ದ ಪ್ರೇಕ್ಷಕರಿಗೆ ರಸದೌತಣ ನೀಡಿ 10 ಎಸೆತ ಬಾಕಿಯಿರುವಂತೆ 6 ವಿಕೆಟ್ ಜಯಗಳಿಸಿದರು.

ಶಮಿ ಮತ್ತು ಬುಮ್ರಾ ಅವರ ಮೊನಚಾದ ಬೌಲಿಂಗ್ ದಾಳಿ ಹಾಗೂ ಮಧ್ಯಮ ಓವರುಗಳಲ್ಲಿ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜ ಅವರು ರನ್ ನಿಯಂತ್ರಿಸಿದ್ದರಿಂದ ಆಸ್ಟ್ರೇಲಿಯಾವನ್ನು ಕೇವಲ 236 ರನ್‌ಗಳಿಗೆ ಆಲೌಟ್ ಮಾಡಿತು. ಧೋನಿ ಅವರ 72 ಎಸೆತಗಳಿಗೆ 59 ರನ್ ಗಳಿಸಿದರೆ, ಕೇದಾರ್ ಜಾದವ್ 86ಎಸೆತಗಳಲ್ಲಿ 81 ರನ್ ಗಳಿಸಿದರು.

5ನೇ ವಿಕೆಟ್‌ಗೆ ಮುರಿಯದ ಜತೆಯಾಟದಿಂದ ಆಸ್ಟ್ರೇಲಿಯಾ ಸ್ಕೋರಿನ ಗಡಿ ದಾಟಿದ ಇವರಿಬ್ಬರು 4 ವಿಕೆಟ್‌ಗೆ 240 ರನ್‌ಗಳೊಂದಿಗೆ ಭಾರತಕ್ಕೆ ಜಯ ತಂದಿತ್ತರು. ಶರ್ಮಾ ಮತ್ತು ಕೊಹ್ಲಿ ನಡುವೆ 76 ರನ್ ಜತೆಯಾಟವು ಭಾರತದ ರನ್ ಚೇಸಿಗೆ ವೇದಿಕೆ ಒದಗಿಸಿತು.
 ಬೌಲಿಂಗ್‌ನಲ್ಲಿ ಶಮಿ, ಬುಮ್ರಾ ಮತ್ತು ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಗಳಿಸಿದರು.

Recent Comments

Leave Comments

footer
Top