• 19 March 2019 05:18
Jai Kannada
Jai Kannada
Blog single photo
February 22, 2019

ಇಪಿಎಫ್ ಬಡ್ಡಿದರ ಶೇ. 8.65ಕ್ಕೆ ಏರಿಕೆ: 6 ಕೋಟಿ ಜನರಿಗೆ ಅನುಕೂಲ 

ನವದೆಹಲಿ: ನಿವೃತ್ತ ನಿಧಿ ಸಂಸ್ಥೆ ಇಪಿಎಫ್‌ಒ ನೌಕರ ಭವಿಷ್ಯ ನಿಧಿಯ ಬಡ್ಡಿ ದರವನ್ನು 2018-19ನೇ ಹಣಕಾಸು ವರ್ಷದಿಂದ ಶೇ. 8.65ಕ್ಕೆ ಏರಿಕೆ ಮಾಡಿದೆ.

ಕಾರ್ಮಿಕ ಸಚಿವ ಸಂತೋಷ್ ಗಂಗಾವರ್ ಹೇಳಿಕೆ ಉಲ್ಲೇಖಿಸಿ ಸುದ್ದಿಸಂಸ್ಥೆಯೊಂದು ಈ ವರದಿ ಮಾಡಿದೆ. 2017-18ರ ಹಣಕಾಸು ವರ್ಷದಲ್ಲಿ ಶೇ. 8.55 ರಷ್ಟು ಇದ್ದ ಇಪಿಎಫ್ ಬಡ್ಡಿದರದಲ್ಲಿ ಹೆಚ್ಚಳದಿಂದ  6ಕೋಟಿ ಭವಿಷ್ಯ ನಿಧಿ ಚಂದಾದಾರರಿಗೆ ಅನುಕೂಲವಾಗಲಿದೆ.

.ಈ ಪ್ರಸ್ತಾವನೆಯು ಹಣಕಾಸು ಸಚಿವಾಲಯದ ಅನುಮೋದನೆಗೆ ಹೋಗಲಿದೆ ಎಂದು ಟ್ರಸ್ಟಿಗಳ ಕೇಂದ್ರೀಯ ಮಂಡಳಿ ಸಭೆ ಬಳಿಕ ಹೇಳಿದರು. ಕಾರ್ಮಿಕ ಸಚಿವರ ನೇತೃತ್ವದಲ್ಲಿ ಟ್ರಸ್ಟಿಗಳ ಕೇಂದ್ರೀಯ ಮಂಡಳಿ ಭವಿಷ್ಯ ನಿಧಿ ಠೇವಣಿಗಳಿಗೆ ಅನ್ವಯವಾಗುವ ಬಡ್ಡಿದರಕ್ಕೆ ಅಂತಿಮ ರೂಪ ನೀಡುತ್ತದೆ.

Recent Comments

Leave Comments

footer
Top